ಭಾಗೀರಥಪುರ ಪ್ರದೇಶದಲ್ಲಿ ನರ್ಮದಾ ನೀರು ಪೂರೈಕೆ ಪೈಪ್ಲೈನ್ನಲ್ಲಿ ಸೋರಿಕೆಯಾಗಿ, ಮೇಲ್ಭಾಗದಲ್ಲಿ ನಿರ್ಮಿತವಾದ ಶೌಚಾಲಯದ ಮಾಲಿನ್ಯ ನೀರಿನೊಂದಿಗೆ ಬೆರೆತಿದ್ದರಿಂದ ಡಿಸೆಂಬರ್ ಅಂತ್ಯದಿಂದ ಜನರು ವಾಂತಿ, ಭೇದಿ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಈ ಘಟನೆಯಿಂದ ಕನಿಷ್ಠ 9 ಜನರು ಸಾವು ಸಂಭವಿಸಿದ್ದು, 1,100 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೀಡಾಗಿದ್ದಾರೆ. ಅಲ್ಲದೆ, 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.