ವಿಚಾರಸಂಕಿರಣದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬಿಲಾವಲ್ ಭುಟ್ಟೋ, ಪಾಕ್ ಪರಮಾಣು ನೀತಿಯನ್ನು ಜಗತ್ತಿಗೆ ನೆನಪಿಸಲು ಪ್ರಯತ್ನಿಸಿದರು. ಪಾಕಿಸ್ತಾನದ ನ್ಯೂಕ್ಲಿಯರ್ ನೀತಿಯ ಪ್ರಕಾರ, ದೇಶದ ಆರ್ಥಿಕತೆಯನ್ನು ಉಸಿರುಗಟ್ಟಿಸುವ ಅಥವಾ ಜಲಮಾರ್ಗಗಳನ್ನು ಕಡಿತಗೊಳಿಸುವಂತಹ ಯಾವುದೇ ತೀವ್ರ ಪರಿಸ್ಥಿತಿ ಎದುರಾದರೂ, ಅದನ್ನು ದೇಶದ ಉಳಿವಿಗಾಗಿ ಅತ್ಯಂತ ಅಪರೂಪದ ಸಂದರ್ಭ ಎಂದು ಪರಿಗಣಿಸಿ ಪರಮಾಣು ದಾಳಿ ನಡೆಸಲು ಅವಕಾಶವಿದೆ ಎಂದು ಬಿಲಾವಲ್ ಭುಟ್ಟೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.