ಸೋಶಿಯಲ್​ ಮೀಡಿಯಾದಲ್ಲಿ ರೆಟ್ರೋ ಶೈಲಿ ಫೋಟೋ ಟ್ರೆಂಡ್​; ಚಾಟ್​ ಜಿಪಿಟಿ ಬಳಸಿ 80ರ ದಶಕದ ಫೋಟೋ ಸೃಷ್ಟಿ ಮಾಡೋದು ಹೇಗೆ?..Retro Trend

1980s AI photo trend
1980s AI photo trend
Published on: 
1980s AI photo trend: ಇನ್​ಸ್ಟಾಗ್ರಾಮ್​​, ಫೇಸ್​ಬುಕ್​​​ ಸೋಶಿಯಲ್​ ಮೀಡಿಯಾದ ಎಲ್ಲ ಪ್ಲಾಟ್​ಫಾರ್ಮ್​ನಲ್ಲಿ ಎಲ್ಲೆಲ್ಲೂ 80ರ ದಶಕದ ಬಾಲಿವುಡ್​, ಹಾಲಿವುಡ್​​​, ಸ್ಯಾಂಡಲ್​ವುಡ್​​ ನಟ-ನಟಿಯರಂತೆ ಕಾಣುವ ಯುವಕ-ಯುವತಿಯರ ಫೋಟೋಗಳು ಮಿಂಚುತ್ತಿದೆ. ಇದು ಎಐ ಚಾಟ್​ ಜಿಪಿಟಿಯ ಹೊಸ ರೆಟ್ರೋ ಟ್ರೆಂಡ್​​. ನೀವು ಸಹ ಎಐ ಟೂಲ್​ ಬಳಕೆ ಮಾಡಿ ನಿಮ್ಮನ್ನು ನೀವು 1980-90ರ ದಶಕ್ಕೆ ಕರೆದುಕೊಂಡು ಹೋಗಬೇಕಾ ಹಾಗಿದ್ದರೆ ಈ ಕೆಳಗೆ ಕೊಟ್ಟ ವಿವರಣೆ ಮತ್ತು ಪ್ರಾಂಪ್ಟ್​​ ಬಳಕೆ ಮಾಡಿ.

ರೆಟ್ರೋ ಫೋಟೋ ಟ್ರೆಂಡ್​

ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಹಾಗೂ ಅಕ್ಷರ ಬ್ರಹ್ಮ ಎನಿಸಿಕೊಂಡಿರುವ ಯೋಗರಾಜ್​ ಭಟ್, ಅಮೃತಾ ಅಯ್ಯಂಗಾರ್​, ಅನುಶ್ರೀ ಸೇರಿದಂತೆ ಹೊಲವರು ಈ ಟ್ರೆಂಡ್​ ಅನ್ನು ಬಳಕೆ ಮಾಡಿಕೊಂಡು ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ, ಇಷ್ಟೇ ಅಲ್ಲದೇ ಕೇರಳದ ಮಾಜಿ ಸಚವ ರಮೇಶ್​ ಚೆನ್ನಿತ್ತಲ, ಓಜೆ ಜನೀಶ್​, ಮಾಜಿ ಸಚಿ ಶಿವನ್​ ಕುಟ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ರೆಟ್ರೋ ಲುಕ್

ಹಲವರಿಗೆ ಇಂದು ಕೂಡ ರೆಟ್ರೋ ಹಾಡುಗಳು ಬಹಳಾನೆ ಇಷ್ಟವಾಗುತ್ತದೆ. ಹಳೆ ಹಾಡಿಗೆ ರೀಲ್ಸ್ ಮಾಡುವುದು. ಅದರಂತೆ ಗೆಟಪ್ ತೊಡುವುದು ಇದ್ದೇ ಇದೆ. ಸದ್ಯ ಅಷ್ಟೆಲ್ಲ ಖರ್ಚು ಮಾಡಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹಣವಿಲ್ಲದವರು ಈ ರೆಟ್ರೋ ಫೋಟೋ ಟ್ರೆಂಡ್​ ಅನ್ನು ಬಳಕೆ ಮಾಡಬಹುದಾಗಿದೆ. ಹಳೆಯ ಕಾಲದ ಹಿರೋಯಿನ್​ ಮತ್ತು ಹೀರೋಗಳಂತೆ ಕೇಶ ವಿನ್ಯಾಸ, ವಸ್ತ್ರ ವಿನ್ಯಾಸ, ಪರಿಕರಗಳು, ಹಿನ್ನೆಲೆ, ಆಭರಣ, ಬೆಳಕು ಮತ್ತು ಛಾಯಾಗ್ರಹಣದ ವಿನ್ಯಾಸವನ್ನು ಸೃಷ್ಟಿ ಮಾಡಿ ಥೇಟ್​​ ಅಪ್ಸರೆಯಂತೆ ಕಾಣುವ ಹಾಗೆ ಎಐ ಸಹಾಯ ಮಾಡುತ್ತದೆ.
ಇಷ್ಟೇ ಅಲ್ಲದೆ ನೀವು ಪುಸ್ತಕ ಓದುತ್ತಿರುವಂತೆ, ಹಳೆಯ ಕುಟುಂಬದ ಛಾಯಾಚಿತ್ರ, ಬಾಲಿವುಡ್ ಸ್ಟುಡಿಯೋ ಭಾವಚಿತ್ರ, ಮ್ಯಾಗಜೀನ್ ಚಿತ್ರೀಕರಣ, ಮದುವೆಯ ಛಾಯಾಚಿತ್ರ ಸೇರಿದಂತೆ ಹಲವು ರೀತಿಯಲ್ಲಿ ವಿನ್ಯಾಸಗೊಳಿಸಬಹುದು.

ಚಾಟ್‌ಜಿಪಿಟಿ ಬಳಸಿ 1980ರ ದಶಕದ ಫೋಟೋವನ್ನು ಹೇಗೆ ರಚಿಸುವುದು

  • ಹಂತ 1: ನಿಮ್ಮ ಮುಖವು ಸ್ಪಷ್ಟವಾಗಿ ಕಾಣುವ ಉತ್ತಮ ಭಾವಚಿತ್ರ ಅಥವಾ ಸೆಲ್ಫಿಯನ್ನು ಆಯ್ಕೆಮಾಡಿ.
  • ಹಂತ 2: ಅದನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ
ಚಿತ್ರ ಉತ್ಪಾದನೆ ಅಥವಾ ಎಡಿಟಿಂಗ್ ಅನ್ನು ಬೆಂಬಲಿಸುವ ಚಾಟ್‌ಜಿಪಿಟಿ ಸಂಭಾಷಣೆಗೆ ಫೋಟೋವನ್ನು ಸೇರಿಸಿ.
  • ಹಂತ 3: 1980ರ ದಶಕದ ಲುಕ್ ಅನ್ನು ವಿವರಿಸಿ
ನೀವು ಏನು ಬದಲಾಯಿಸಬೇಕೆಂದು ಬಯಸುತ್ತೀರಿ ಎಂಬುದನ್ನು ಚಾಟ್‌ಜಿಪಿಟಿಗೆ ತಿಳಿಸಿ. ನೀವು ಬಟ್ಟೆಗಳು, ಹೇರ್‌ಸ್ಟೈಲ್, ಹಿನ್ನೆಲೆ, ಲೈಟಿಂಗ್ ಮತ್ತು ಫೋಟೋದ ಪ್ರಕಾರವನ್ನು ಉಲ್ಲೇಖಿಸಬಹುದು.
  • ಹಂತ 4: ನಿರ್ದಿಷ್ಟ ಥೀಮ್ ಅನ್ನು ಆಯ್ಕೆಮಾಡಿ
ಉದಾಹರಣೆಗೆ, ನೀವು ಹಳೆಯ ಬಾಲಿವುಡ್ ಸ್ಟುಡಿಯೋ ಪೋರ್ಟ್ರೇಟ್, ಭಾರತೀಯ ಕುಟುಂಬದ ಆಲ್ಬಮ್ ಫೋಟೋ, 1980ರ ಮದುವೆಯ ಚಿತ್ರ ಅಥವಾ ವಿಂಟೇಜ್ ಮ್ಯಾಗಜೀನ್ ಶೂಟ್ ಅನ್ನು ಕೇಳಬಹುದು.
  • ಹಂತ 5: ಚಿತ್ರವನ್ನು ಪರಿಷ್ಕರಿಸಿ
ಮೊದಲ ಫಲಿತಾಂಶವು ನಿಮಗೆ ಬೇಕಾದಂತೆ ಬರದಿದ್ದರೆ, ಮತ್ತೊಂದು ಸೂಚನೆಯನ್ನು ನೀಡಿ. ನಿಮ್ಮ ಮುಖವು ಗುರುತಿಸಬಹುದಾದಂತೆ ಇಟ್ಟುಕೊಂಡು, ಹೇರ್‌ಸ್ಟೈಲ್, ಬಟ್ಟೆ, ಹಿನ್ನೆಲೆ ಅಥವಾ ಲೈಟಿಂಗ್ ಅನ್ನು ಬದಲಾಯಿಸುವಂತೆ ನೀವು AI ಅನ್ನು ಕೇಳಬಹುದು.

ರೆಟ್ರೋ ಶೈಲಿಗೆ ಬದಲಿಸುವ ಪ್ರಾಂಪ್ಟ್​ ಇದು

PROMPT 1 - 1980s Bollywood Studio Portrait:Create an authentic 1980s Bollywood studio portrait of me. Keep my facial features and identity exactly recognizable, do not change my face. Dress me in period-appropriate Indian clothing, with a matching 1980s hairstyle and accessories. Use warm studio lighting, soft focus, subtle film grain, and slightly faded colors. It should look like a genuine photograph taken in an Indian studio in the 1980s, not a modern photo with a vintage filter.

PROMPT 2 - 1987 Indian Street:Imagine this photo was taken on an Indian street in 1987. Keep my face and identity exactly recognizable. Recreate the entire surroundings, including my clothes, hairstyle, vehicles, shop signs, and colors to accurately match late-1980s India. Use natural daylight, realistic colors, and subtle analog film grain to look like a real vintage photograph.
ಬಾಲಿವುಡ್​ ಹೀರೋ-ಹೀರೋಯಿನ್
create this photo as as an authentic 1980s Bollywood film portrait. Preserve my exact facial identity, facial proportions, skin tone and expression. Give me an era-appropriate Bollywood hairstyle, clothing, jewellery and makeup without changing my face. Use dramatic but realistic studio lighting, warm analogue colours, subtle 35mm film grain and a slightly faded printed-photo texture. The styling should feel inspired by Indian cinema and fashion of the mid-1980s, elegant and glamorous rather than costume-like. Make the final image look like a real Bollywood magazine photograph from 1985.

ಇನ್​ಸ್ಟಾಗ್ರಾಮ್​ಗೆ ಶೇರ್ ಮಾಡೋದು ಹೇಗೆ

ನೀವು 80ರ ದಶಕದ ಫೋಟೋ ಕ್ರಿಯೇಟ್ ಮಾಡಿದ ನಂತರ ಇನ್​ಸ್ಟಾಗ್ರಾಮ್​ ಸ್ಟೋರಿಗೆ ಹಂಚಿಕೊಳ್ಳಬಹುದು. ಆಗ ಆಡ್​ ಯುವರ್ಸ್​ ಎನ್ನುವ ಸ್ಟಿಕರ್​ಗೆ ಲಿಂಕ್​ ಮಾಡಬಹುದು. ಆಗನಿಮ್ಮ ಅನುಯಾಯಿಗಳು ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದು ಹಳೆಯ ನೆನಪು ಹಾಗು ಆಗ ನಾನು ಹೇಗೆ ಕಾಣುತ್ತಿದ್ದೆ ಎನ್ನುವುದನ್ನು ಉಲ್ಲೇಖಿಸುತ್ತದೆ, (ಏಜೆನ್ಸೀಸ್).