ಡಿಎಂಕೆ ನೇತೃತ್ವದ ಮೈತ್ರಿಕೂಟ 92–110 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಎನ್‌ಡಿಎ ಮೈತ್ರಿಕೂಟ 22–32 ಸ್ಥಾನಗಳಿಗೆ ತೃಪ್ತಿಪಡುವ ಸಾಧ್ಯತೆಯಿದೆ. ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಮತ ಹಂಚಿಕೆ ಸುಮಾರು 23% ಕ್ಕೆ ಕುಸಿಯುವ ಮುನ್ಸೂಚನೆ ಇದೆ. ಟಿವಿಕೆ ಪಕ್ಷದ ಈ ಅಭೂತಪೂರ್ವ ಏಳಿಗೆಗೆ ಯುವ ಮತದಾರರ ಬೆಂಬಲವೇ ಪ್ರಮುಖ ಕಾರಣವಾಗಿದ್ದು, ವರ್ಷದ ಬಾರಿಗೆ ಮತ ಚಲಾಯಿಸಿದವರಲ್ಲಿ ಶೇ. 68 ರಷ್ಟು ಮಂದಿ ವಿಜಯ್ ಪರವಾಗಿ ನಿಂತಿದ್ದಾರೆ ಎನ್ನಲಾಗಿದ್ದು, 20-29 ವರ್ಷದವರು ಶೇ. 59 ಮತ್ತು 30-39 ವರ್ಷದ ಶೇ. 45 ರಷ್ಟು ಮತದಾರರು ಟಿವಿಕೆಯನ್ನು ಬೆಂಬಲಿಸಿದ್ದಾರೆ ಎಂದು ಭವಿಷ್ಯ ನುಡಿದಿದೆ.