ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದರು. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ತಿರುಚಿರಾಪಳ್ಳಿ ಪೂರ್ವದಲ್ಲಿ 91,381 ಮತಗಳನ್ನು ಪಡೆದ ಅವರು ಡಿಎಂಕೆ ಅಭ್ಯರ್ಥಿ ಎಸ್. ಇನಿಗೊ ಇರುದಯರಾಜ್ರನ್ನು ಸೋಲಿಸಿದರೆ, ಪೆರಂಬೂರ್ ಕ್ಷೇತ್ರದಲ್ಲಿ 1,20,365 ಮತಗಳನ್ನು ಪಡೆಯುವ ಮೂಲಕ ಆರ್‌ಡಿ ಶೇಖರ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದ್ದರು.