ಮುಂದಿನ ಎರಡು-ಮೂರು ವಾರಗಳಲ್ಲಿ ಇರಾನ್ ವಿರುದ್ಧದ ಅಮೆರಿಕದ ದಾಳಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದಿರುವ ಟ್ರಂಪ್, ಇರಾನ್ ದೇಶವನ್ನು ಶಿಲಾಯುಗಕ್ಕೆ ತಳ್ಳುವಷ್ಟು ಕಠಿಣವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇರಾನ್‌ನ ನೌಕಾಪಡೆ ಈಗಾಗಲೇ ಕಣ್ಮರೆಯಾಗಿದ್ದು, ವಾಯುಪಡೆ ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿಸಿದರು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಮೇಲಿನ ನಾಯಕತ್ವದ ನಿಯಂತ್ರಣ ತಪ್ಪಿದ್ದು, ಕ್ಷಿಪಣಿ ಮತ್ತು ಡ್ರೋನ್ ಉಡಾಯಿಸುವ ಅವರ ಶಕ್ತಿ ಈಗ ಕುಸಿದಿದೆ. ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್‌ಗಳು ಧೂಳೀಪಟವಾಗಿವೆ ಎಂದರು.