Merchant Vessel: ಓಮನ್ ಸಮುದ್ರದಲ್ಲಿ ಅಮೆರಿಕ ನೌಕಾಸೇನೆ ದಾಳಿ? ಮುಳುಗುತ್ತಿರುವ ಹಡಗಿನಲ್ಲಿದ್ದ 24 ಭಾರತೀಯರು ಸೇಫ್!

Merchant Vessel
Merchant Vessel
Published on
ನವದೆಹಲಿ: ಓಮನ್ ದೇಶದ ಮಸಿರಾ ದ್ವೀಪದ ಬಳಿ ಸರಕು ಸಾಗಣೆ ಹಡಗೊಂದರ (Merchant Vessel) ಮೇಲೆ ಅಮೆರಿಕ ನೌಕಾಸೇನೆ (US Navy) ದಾಳಿ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಾಳಿಗೆ ಒಳಗಾದ 'ಎಂವಿ ಮಾರಿವೆಕ್ಸ್' (MT MARIVEX) ಎಂಬ ಹಡಗು ಸದ್ಯ ಸಮುದ್ರದಲ್ಲಿ ಮುಳುಗುತ್ತಿದೆ. ಈ ಹಡಗಿನಲ್ಲಿ ಬರೋಬ್ಬರಿ 24 ಭಾರತೀಯ ಸಿಬ್ಬಂದಿ (Seafarers) ಇದ್ದು, ಸದ್ಯ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಹಡಗು ಸಚಿವಾಲಯ ಖಚಿತಪಡಿಸಿದೆ.
ಸೋಮವಾರ ಮಧ್ಯಾಹ್ನ ಸುಮಾರು 1:30 ರ ಸುಮಾರಿಗೆ ಈ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ತಕ್ಷಣ, ಒಳಗಿದ್ದ ಸಿಬ್ಬಂದಿ ತುರ್ತು ರಕ್ಷಣೆಗಾಗಿ 'SOS' ಸಂದೇಶಗಳನ್ನು ಕಳುಹಿಸಿದ್ದರು.

ಭಾರತೀಯ ಸಿಬ್ಬಂದಿ ಸುರಕ್ಷಿತ

ಆಲ್ ಇಂಡಿಯಾ ಸೀಫೇರರ್ಸ್ ಯೂನಿಯನ್ (ಭಾರತೀಯ ನಾವಿಕರ ಸಂಘ) ಪ್ರಕಾರ, ಹಡಗಿನಲ್ಲಿದ್ದ ನಿಲೇಶ್ ಎಂಬ ಸಿಬ್ಬಂದಿ ತಕ್ಷಣವೇ ಯೂನಿಯನ್ ಅನ್ನು ಸಂಪರ್ಕಿಸಿ ತುರ್ತು ಸಹಾಯ ಕೋರಿದ್ದರು. "ಪ್ರಾಥಮಿಕ ಮಾಹಿತಿಯ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ನಾವು ವಿದೇಶಾಂಗ ಸಚಿವಾಲಯ (MEA), ಭಾರತೀಯ ನೌಕಾಸೇನೆ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸುರಕ್ಷಿತ ವಾಪಸಾತಿಗಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಸಚಿವಾಲಯ ಮತ್ತು ನಾವಿಕರ ಸಂಘ ತಿಳಿಸಿದೆ.
ಸದ್ಯ ಸಮುದ್ರದ ಮಧ್ಯದಲ್ಲಿ ಸಿಲುಕಿರುವ ನಾವಿಕರ ಕುಟುಂಬಗಳಿಗೆ ಧೈರ್ಯ ತುಂಬಿರುವ ಸಂಘವು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ. ಅಮೆರಿಕ ಸೇನೆ ನಿಜವಾಗಿಯೂ ದಾಳಿ ಮಾಡಿದೆಯೇ ಅಥವಾ ಬೆಂಕಿ ಅವಘಡಕ್ಕೆ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ,(ಏಜೆನ್ಸೀಸ್​),
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net