ಹೌದು, ಡೈನೋಸಾರ್ಗಳಂತೆ, ನಮಗೆ ತಿಳಿದಿಲ್ಲದ ಅನೇಕ ಜೀವಿಗಳು ಭೂಮಿಯ ಮೇಲೆ ಹುಟ್ಟಿ, ಬೆಳೆದು, ಕಣ್ಮರೆಯಾಗಿವೆ. ವಿಜ್ಞಾನಿಗಳು ಇತ್ತೀಚೆಗೆ ಹೊಸ ರೀತಿಯ ಸಮುದ್ರ ಹಾವನ್ನು ಕಂಡುಹಿಡಿದಿದ್ದಾರೆ. ಈ ಸಮುದ್ರ ಹಾವು ಸುಮಾರು 56 ರಿಂದ 34 ಮಿಲಿಯನ್ ವರ್ಷಗಳ ಹಿಂದೆ, ಅಂದರೆ ಈಯಸೀನ್ ಯುಗದಲ್ಲಿ ವಾಸಿಸುತ್ತಿತ್ತು. ವಿಜ್ಞಾನಿಗಳು ಇದಕ್ಕೆ ಪ್ಯಾಲಿಯೋಫಿಸ್ ಕೊಲೋಸಸ್ ಎಂದು ಹೆಸರಿಸಿದ್ದಾರೆ.