ಈ ವಂಚನೆಯ ಜಾಲವು ಅತ್ಯಂತ ದೊಡ್ಡ ಮಟ್ಟದಲ್ಲಿ ಹರಡಿಕೊಂಡಿದ್ದು, ವೀಸಾ ಅವಧಿ ಮುಗಿದವರು ಸಲ್ಲಿಸುತ್ತಿರುವ ಆಶ್ರಯ ಅರ್ಜಿಗಳ ಪ್ರಮಾಣ ಶೇ. 35ಕ್ಕೆ ಏರಿಕೆಯಾಗಿದೆ. 2025ರ ವೇಳೆಗೆ ಇಂತಹ ಅರ್ಜಿಗಳ ಸಂಖ್ಯೆ ಒಂದು ಲಕ್ಷವನ್ನು ದಾಟುವ ಅಂದಾಜಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಆಶ್ರಯ ಕೋರುವವರ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ, ನೈಜೀರಿಯಾ, ಭಾರತ ಮತ್ತು ಉಗಾಂಡಾ ನಂತರದ ಸ್ಥಾನಗಳಲ್ಲಿವೆ.