ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮುಹೂಜಿ ಕೈನೆರುಗಾಬಾ, ಮದ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಕೊನೆಯಾಗಲಿ ಎಂದು ನಾವು ಕೂಡ ಬಯಸುತ್ತೇವೆ. ಈ ಯುದ್ಧದಿಂದ ಇಡೀ ವಿಶ್ವವೂ ಬಳಲಿದೆ. ಆದರೆ, ಇಸ್ರೇಲ್‌ನ ನಾಶ ಮಾಡುವ ಅಥವಾ ಸೋಲಿಸುವ ಯಾವುದೇ ಪ್ರಯತ್ನಗಳು ನಡೆದಿದ್ದಲ್ಲಿ ನಾವು ಕೂಡ ಇಸ್ರೇಲ್ ಪರವಾಗಿ ಯುದ್ಧಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.