ಅಮೆರಿಕದ ಎದೆಯಲ್ಲಿ ನಡುಕ: ಕಿಮ್ ಕೈಗೆ ಸಿಕ್ಕಿತು ಅತ್ಯಂತ ಶಕ್ತಿಶಾಲಿ ಡೆಡ್ಲಿ ಇಂಜಿನ್! Missile Engine Test

ಅಮೆರಿಕದ ಎದೆಯಲ್ಲಿ ನಡುಕ: ಕಿಮ್ ಕೈಗೆ ಸಿಕ್ಕಿತು ಅತ್ಯಂತ ಶಕ್ತಿಶಾಲಿ ಡೆಡ್ಲಿ ಇಂಜಿನ್!
ಅಮೆರಿಕದ ಎದೆಯಲ್ಲಿ ನಡುಕ: ಕಿಮ್ ಕೈಗೆ ಸಿಕ್ಕಿತು ಅತ್ಯಂತ ಶಕ್ತಿಶಾಲಿ ಡೆಡ್ಲಿ ಇಂಜಿನ್!
Published on: 
ಪಯೋಂಗ್ಯಾಂಗ್: ಜಗತ್ತಿನ ಗಮನವೆಲ್ಲಾ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದತ್ತ ನೆಟ್ಟಿರುವಾಗ, ಅತ್ತ ಉತ್ತರ ಕೊರಿಯಾ ಮತ್ತೊಂದು ಅಘಾತಕಾರಿ ಹೆಜ್ಜೆ ಇಟ್ಟಿದೆ. ಅಮೆರಿಕದ ಪ್ರಧಾನ ಭೂಭಾಗವನ್ನೇ ಗುರಿಯಾಗಿಸಬಲ್ಲ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಇಂಜಿನ್(Missile Engine Test) ಅನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಬೆಳವಣಿಗೆಯು ಜಾಗತಿಕ ಭದ್ರತೆಗೆ ಹೊಸ ಸವಾಲನ್ನು ಒಡ್ಡಿದೆ.

ಕಿಮ್ ಮಾಸ್ಟರ್ ಪ್ಲಾನ್!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ನೇರ ಉಸ್ತುವಾರಿಯಲ್ಲಿ ಈ ಹೈ-ಥ್ರಸ್ಟ್, ಘನ-ಇಂಧನ ಇಂಜಿನ್ ಪರೀಕ್ಷೆ ನಡೆದಿದೆ.
ತಾಂತ್ರಿಕ ಕ್ಷಮತೆ: ಹೊಸ ಇಂಜಿನ್ ಅನ್ನು ಕಾರ್ಬನ್ ಫೈಬರ್ ಸಂಯೋಜಿತ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಇದರ ಗರಿಷ್ಠ ತಳ್ಳುವಿಕೆ ಸಾಮರ್ಥ್ಯವು 2,500 ಕಿಲೋಟನ್ಸ್‌ಗೆ ಏರಿಕೆಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಇದು 1,971 ಕಿಲೋಟನ್ಸ್ ಇತ್ತು. ಅಂದರೆ, ಕ್ಷಿಪಣಿಯ ವೇಗ ಮತ್ತು ದೂರ ಕ್ರಮಿಸುವ ಸಾಮರ್ಥ್ಯವನ್ನು ಕಿಮ್ ಗಣನೀಯವಾಗಿ ಹೆಚ್ಚಿಸಿದ್ದಾರೆ.
ಅಮೆರಿಕಕ್ಕೆ ನೇರ ಬೆದರಿಕೆ: ಈ ಇಂಜಿನ್ ಪರೀಕ್ಷೆಯ ಮುಖ್ಯ ಉದ್ದೇಶ ಅಮೆರಿಕದ ಭೂಭಾಗವನ್ನು ತಲುಪಬಲ್ಲ ಖಂಡಾಂತರ ಕ್ಷಿಪಣಿಗಳ ಬಲವನ್ನು ಹೆಚ್ಚಿಸುವುದು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಒಂದೇ ಕ್ಷಿಪಣಿ, ಹಲವು ಅಣುಬಾಂಬ್!

ರಕ್ಷಣಾ ತಜ್ಞರ ಪ್ರಕಾರ, ಇಂಜಿನ್ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದು ಕೇವಲ ದೂರಕ್ಕಾಗಿ ಅಲ್ಲ. ಒಂದೇ ಕ್ಷಿಪಣಿಯ ಮೇಲೆ ಅನೇಕ ಯುದ್ಧತಲೆಗಳನ್ನು ಅಳವಡಿಸಲು ಇದು ಸಹಕಾರಿಯಾಗುತ್ತದೆ. ಇದರಿಂದ ಅಮೆರಿಕದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭೇದಿಸುವುದು ಉತ್ತರ ಕೊರಿಯಾಕ್ಕೆ ಸುಲಭವಾಗಲಿದೆ.

ಹೊಸ ಯುದ್ಧ ಟ್ಯಾಂಕ್ ಮತ್ತು ವಿಶೇಷ ಪಡೆಗಳ ತಪಾಸಣೆ

ಕ್ಷಿಪಣಿ ಇಂಜಿನ್ ಮಾತ್ರವಲ್ಲದೆ, ಕಿಮ್ ಜೊಂಗ್ ಉನ್ ಅವರು ಉತ್ತರ ಕೊರಿಯಾದ ಹೊಸ ಮೇನ್ ಬ್ಯಾಟಲ್ ಟ್ಯಾಂಕ್ ಅನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ವಿಶೇಷ ಕಾರ್ಯಾಚರಣಾ ಪಡೆಗಳ ತರಬೇತಿಯನ್ನು ವೀಕ್ಷಿಸುವ ಮೂಲಕ ತಮ್ಮ ಸೇನೆ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ದೇಶದ ಕಾರ್ಯತಂತ್ರದ ಮಿಲಿಟರಿ ಶಕ್ತಿಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಈ ಪರೀಕ್ಷೆ ಮಹತ್ವದ ಮೈಲಿಗಲ್ಲು ಎಂದು ಕಿಮ್ ಘೋಷಿಸಿದ್ದಾರೆ.

ಅಮೆರಿಕದ ವಿರುದ್ಧ ಭಯೋತ್ಪಾದನೆ' ಆರೋಪ

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಯನ್ನು ಕಿಮ್ ಜೊಂಗ್ ಉನ್ ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕವು ಜಾಗತಿಕವಾಗಿ ಆಕ್ರಮಣಶೀಲತೆ ನಡೆಸುತ್ತಿದೆ ಎಂದು ಕಿಮ್ ತಮ್ಮ ಸಂಸತ್ತಿನಲ್ಲಿ ಕಿಡಿಕಾರಿದ್ದಾರೆ. 2019 ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ನಡುವಿನ ಮಾತುಕತೆ ಮುರಿದುಬಿದ್ದ ನಂತರ, ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಸಂಗ್ರಹವನ್ನು ದ್ವಿಗುಣಗೊಳಿಸಲು ಪಣತೊಟ್ಟಿದೆ.

ಜಾಗತಿಕ ಪ್ರತಿಕ್ರಿಯೆ

ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು ಉತ್ತರ ಕೊರಿಯಾದ ಈ ಕ್ಷಿಪಣಿ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆ. ಕಿಮ್ ಅವರ ಈ ನಡೆ ಪೆಸಿಫಿಕ್ ಪ್ರದೇಶದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ,(ಏಜೆನ್ಸೀಸ್).