15 ವರ್ಷದ ಶ್ರೀನಂದಾ, ಪಾಲಕ್ಕಾಡ್‌ನ ಕದಂಬಜಿಪುರಂ ಮೂಲದ ರಮೇಶ್ ಗೋಪಾಲನ್ ಮತ್ತು ರೋಹಿಣಿ ದಂಪತಿಯ ಪುತ್ರಿ. 40 ಜನರ ಗುಂಪು ಕಳೆದ ಶನಿವಾರ ಪ್ರವಾಸಕ್ಕಾಗಿ ತಮ್ಮ ಊರಿನಿಂದ ಕರ್ನಾಟಕಕ್ಕೆ ಆಗಮಿಸಿತ್ತು. ಮಂಗಳವಾರ (ಏ.07) ಸಂಜೆ 5:35ರ ಸುಮಾರಿಗೆ ಶ್ರೀನಂದಾ ದಿಢೀರ್ ಕಣ್ಮರೆಯಾದರು. ಸಂಜೆ 5.20ಕ್ಕೆ ಕುಟುಂಬದೊಂದಿಗೆ ತೆಗೆದ ಫೋಟೋದಲ್ಲಿದ್ದ ಬಾಲಕಿ, 5.35ಕ್ಕೆ ನಾಪತ್ತೆ ಆದಳು. ಇದು ಹೆತ್ತವರಲ್ಲಿ ಭಾರೀ ಆತಂಕ ಹಾಗೂ ಅನುಮಾನ ಮೂಡಿಸಿತು. ತೀವ್ರ ಹುಡುಕಾಟದ ಮೂರನೇ ದಿನದಂದು ಬಾಬಾ ಬುಧನ್‌ಗಿರಿ ಬಳಿ 1500 ಅಡಿ ಆಳದಲ್ಲಿ ಶ್ರೀನಂದಾ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬದಲ್ಲಿ ಆಕ್ರದಂನ ಮುಗಿಲು ಮುಟ್ಟಿದೆ, (ಏಜೆನ್ಸೀಸ್).