ದಕ್ಷಿಣ ಆಫ್ರಿಕಾ: 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿ20 ಶೃಂಗಸಭೆ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದೆ. ಈ ಹಿನ್ನೆಲೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಜೋಹಾನ್ಸ್ಬರ್ಗ್ ತಲುಪಿದ್ದಾರೆ. ಶೃಂಗಸಭೆಯ ಮೂರು ಅಧಿವೇಶನಗಳಲ್ಲಿ ಅವರು ಭಾಗವಹಿಸಲಿದ್ದು, ವೇದಿಕೆಯಲ್ಲಿ ಅವರು ಸಮಗ್ರ ಅಭಿವೃದ್ಧಿ, ಹವಾಮಾನ ಬಿಕ್ಕಟ್ಟು ಮತ್ತು ಕೃತಕ ಬುದ್ಧಿಮತ್ತೆಯಂತಹ ಪ್ರಮುಖ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.