ಹೈದರಾಬಾದ್: ಸಂಕ್ರಾಂತಿ ಹಬ್ಬಕ್ಕೆ ಹಲವು ರಜೆಗಳಿದ್ದ ಹಿನ್ನೆಲೆ ಸ್ಟಾರ್ ನಟರ ಸಿನಿಮಾ ಸೇರಿದಂತೆ ಹೊಸಬರ ಚಿತ್ರಗಳು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಿಗೆ ಎಂಟ್ರಿಕೊಟ್ಟಿತು. ಒಂದಷ್ಟು ಪ್ರೇಕ್ಷಕರ ಗಮನ ಸೆಳೆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರಿತು. ಈ ಮಧ್ಯೆ, ಫೆಬ್ರವರಿಗೆ ಕಾಲಿಟ್ಟಿರುವ ಚಿತ್ರೋದ್ಯಮಗಳು, ಹೆಚ್ಚು ರಜೆಗಳಿಲ್ಲದ ತಿಂಗಳಲ್ಲಿ ಯಾವ ಸಿನಿಮಾಗಳನ್ನು ತೆರೆಗೆ ತರುವುದು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ಖಾಲಿ ಹೊಡೆಯುತ್ತಿರುವ ಚಿತ್ರಮಂದಿರಗಳಿಗೆ ಜನರನ್ನು ಕರೆತರುವುದಾದರೂ ಹೇಗೆ? ಎಂದು ಗೊಂದಲದಲ್ಲಿದೆ.