ನಿಮ್ಮ ಫೇವರಿಟ್​ ಪೊಷಿಸನ್ ಯಾವುದು ಎಂದ ನೆಟ್ಟಿಗನಿಗೆ ಖಡಕ್​ ಉತ್ತರ ಕೊಟ್ಟ ಹಾಟ್​ ಬ್ಯೂಟಿ ಕಾಮಾಕ್ಷಿ! Kamakshi Bhaskarla

ಟಾಲಿವುಡ್​ ನಟಿ ನಟಿ ಕಾಮಾಕ್ಷಿ ಭಾಸ್ಕರ್ಲಾ
ಟಾಲಿವುಡ್​ ನಟಿ ನಟಿ ಕಾಮಾಕ್ಷಿ ಭಾಸ್ಕರ್ಲಾ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿದೆ
  • ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ
  • ಅದೇ ರೀತಿಯ ಕಾಮೆಂಟ್​ಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಖಡಕ್​ ಉತ್ತರ ನೀಡಿದ್ದಾರೆ
Kamakshi Bhaskarla : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಇದೀಗ ಅದೇ ರೀತಿಯ ಕಾಮೆಂಟ್​ಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಖಡಕ್​ ಉತ್ತರ ನೀಡಿದ್ದಾರೆ.
ಕಾಮಾಕ್ಷಿ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ತಮ್ಮ ಫಾಲೋವರ್ಸ್​ ಜತೆ ಪ್ರಶ್ನೋತ್ತರ ಚಟುವಟಿಕೆ ನಡೆಸಿದ್ದರು. ಫಾಲೋವರ್ಸ್​ ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಾಮಾಕ್ಷಿ ಅವರ ಕೆಲಸವಾಗಿತ್ತು. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ಕಾಮಾಕ್ಷಿ ಅವರು ಖಡಕ್​ ಉತ್ತರವನ್ನು ನೀಡಿದ್ದಾರೆ.
ಅಷ್ಟಕ್ಕೂ ನೆಟ್ಟಿಗ ಕೇಳಿದ ಪ್ರಶ್ನೆ ಏನೆಂದರೆ, ನಿಮ್ಮಿಷ್ಟದ ಪೊಷಿಸನ್​ (ಲೈಂಗಿಕ ಭಂಗಿ) ಯಾವುದು? ಅನ್ನೋದು. ಇದಕ್ಕೆ ಉತ್ತರಿಸಿರುವ ಕಾಮಾಕ್ಷಿ, ನನ್ನಿಷ್ಟದ ಪೊಷಿಸನ್​ ಬಗ್ಗೆ ನಾನು ವಿವರಣೆ ನೀಡಲಾರೆ. ನಾನು ಯಾವ ಪೊಷಿಸನ್​ನಲ್ಲಿದ್ದೇನೆ ಅದನ್ನು ಗೌರವಿಸುತ್ತೇನೆ. ನಾನು ನನ್ನ ಆಯ್ಕೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇನೆ. ಅದು ನನ್ನ ವೃತ್ತಿ ಜೀವನದಲ್ಲಾಗಿರಬಹುದು ಅಥವಾ ವೈಯಕ್ತಿಕ ಜೀವನದಲ್ಲಾಗಿರಬಹುದು ಎಂದು ಹೇಳಿದ್ದಾರೆ.
ಈ ವಿಡಿಯೋ ನೋಡುತ್ತಿರುವವರಿಗೆ ನಾನು ಹೇಳುವುದೇನೆಂದರೆ, ನಿಮ್ಮ ಜೀವನದಲ್ಲಿ ಸ್ಪಷ್ಟತೆ ಮತ್ತು ಆತ್ಮಗೌರವ ಇರಲಿ. ಏಕೆಂದರೆ, ಜೀವನದ ಅನುಭವ ನಿಮ್ಮನ್ನು ಬಲವಾದ ಸ್ಥಾನದಲ್ಲಿ ಇರಿಸುತ್ತದೆ ಮತ್ತು ನಿಮ್ಮ ಜೀವನಕ್ಕೆ ಮೌಲ್ಯವನ್ನು ತುಂಬುತ್ತದೆ ಎನ್ನುವ ಮೂಲಕ ಪ್ರಶ್ನೆ ಕೇಳಿದವನಿಗೆ ಖಡಕ್​ ಉತ್ತರ ನೀಡಿದ್ದಾರೆ.
ಅಂದಹಾಗೆ, ಕನ್ನಡಿಗರಿಗೆ ಕಾಮಾಕ್ಷಿ ಪರಿಚಯ ಇಲ್ಲದಿರಬಹುದು ಆದರೆ, ಅವರು ನಟಿಸಿದ ಸಿನಿಮಾಗಳಂತೂ ನೆನಪಿನಲ್ಲಿರುತ್ತವೆ. ಅಂತಹ ಚಿತ್ರಗಳಲ್ಲಿ ಪೋಲಿಮೆರಾ ಹಾಗೂ ದೂತಾ ಕೂಡ ಸೇರಿವೆ. ಈ ಚಿತ್ರಗಳನ್ನು ನೋಡಿದವರು ಯಾರೂ ಕಾಮಾಕ್ಷಿ ಅವರನ್ನು ಮರೆಯುವುದಿಲ್ಲ. ಈ ಸುಂದರಿ ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದಿದ್ದಾರೆ.
ಅಂದಹಾಗೆ, ಕಾಮಾಕ್ಷಿ ಅವರು ತುಂಬಾ ಗ್ಲಾಮರಸ್​ ಬೆಡಗಿ. ಅವರ ಇನ್​ಸ್ಟಾಗ್ರಾಂ ಪೇಜ್​ ತೆಗೆದು ನೋಡಿದರೆ ಬಿಕಿನಿ ಮತ್ತು ಅರೆಬೆತ್ತಲೆ ಫೋಟೋಗಳೇ ತುಂಬಿವೆ. ಆದರೆ, ಪೋಲಿಮೆರಾ ಚಿತ್ರದಲ್ಲಿ ಕಾಮಾಕ್ಷಿ ಡಿಗ್ಲಾಮರಸ್​ ಆಗಿ ಕಾಣಿಸಿಕೊಂಡರು. ಇನ್​ಸ್ಟಾದಲ್ಲಿ ಅವರ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಕೊನೆಯದಾಗಿ ಈ ಬೆಡಗಿ '12A ರೈಲ್ವೆ ಕಾಲನಿ' ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲರಿ ನರೇಶ್ ನಾಯಕನಾಗಿ ನಟಿಸಿರುವ ಈ ಚಿತ್ರವೂ ಒಂದು ಥ್ರಿಲ್ಲರ್ ಸಿನಿಮಾ. ಆದರೆ, ಬಾಕ್ಸ್​ಆಫೀಸ್​ನಲ್ಲಿ ಯಶಸ್ಸು ಸಾಧಿಸಲಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net