ಈ ಘಟನೆಯಿಂದ ಕೆರಳಿದ್ದ ಜಹಾಂಗೀರ್ ಖಾನ್, ಐಪಿಎಸ್ ಅಧಿಕಾರಿಗೆ ಬಹಿರಂಗ ಸವಾಲು ಹಾಕುತ್ತಾ, ಅವರು ಸಿಂಘಂ ಆಗಿದ್ದರೆ, ನಾನು ಪುಷ್ಪಾ ಎಂದು ಸಿನಿಮೀಯ ಶೈಲಿಯಲ್ಲಿ ಡೈಲಾಗ್ ಹೊಡೆದುಕೊಂಡಿದ್ದರು. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಪುಷ್ಪಾ ಎಲ್ಲಿದ್ದಾನೆ? ಎಂದು ಕಾಲೆಳೆದಿದ್ದರು. ಬಂಗಾಳದ ಇತರ ಕ್ಷೇತ್ರಗಳ ಫಲಿತಾಂಶ ಈಗಾಗಲೇ ಮೇ 4 ರಂದೇ ಹೊರಬಿದ್ದಿದ್ದು, ಇದೀಗ ಫಾಲ್ತಾ ಕ್ಷೇತ್ರದ ಮರುಮತದಾನ ಇಡೀ ದೇಶದ ಗಮನ ಸೆಳೆದಿದೆ(ಏಜೆನ್ಸೀಸ್).