ಗುರುವಾರ ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಮೈಥಿಲಿ ಠಾಕೂರ್, 2005ಕ್ಕೂ ಮುನ್ನ ಬಿಹಾರದಲ್ಲಿದ್ದ ಆರ್ಜೆಡಿ ಆಡಳಿತವನ್ನು ಹಸ್ತಿನಾಪುರದ ಅಂಧ ರಾಜ ಧೃತರಾಷ್ಟ್ರನ ಆಡಳಿತಕ್ಕೆ ಹೋಲಿಸಿದ್ದರು. ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಪುತ್ರ ತೇಜಸ್ವಿ ಯಾದವ್ ಮೇಲಿರುವ ಅತೀವ ಮೋಹದಿಂದಾಗಿ ರಾಜ್ಯದ ಜನರ ಸಮಸ್ಯೆಗಳಿಗೆ ಕುರುಡಾಗಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದರು. ಧೃತರಾಷ್ಟ್ರನಿಗೆ ತನ್ನ ರಾಜ್ಯಕ್ಕಿಂತ ತನ್ನ ಮಗ ದುರ್ಯೋಧನನೇ ಮುಖ್ಯವಾಗಿದ್ದಂತೆ, ಇಲ್ಲಿಯೂ ಅದೇ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದ್ದರು.