ಕೊಲಂಬೊ: 2026ರ ಟಿ20 ವಿಶ್ವಕಪ್ನ ಅತ್ಯಂತ ನಿರೀಕ್ಷಿತ ಪಂದ್ಯದಲ್ಲಿ ಭಾರತದ ವಿರುದ್ಧ 61 ರನ್ಗಳ ಭಾರಿ ಅಂತರದ ಸೋಲು ಕಂಡಿರುವ ಪಾಕಿಸ್ತಾನ ತಂಡದಲ್ಲಿ ಈಗ ಹತಾಶೆ ಮನೆಮಾಡಿದೆ. ಆದರೆ, ತಂಡದ ಮುಖ್ಯ ಕೋಚ್ ಮೈಕ್ ಹೆಸನ್(Mike Hesson) ಮಾತ್ರ ತಮ್ಮ ತಂಡದ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲು ಬೌಲಿಂಗ್ ಆಯ್ದುಕೊಂಡ ಟಾಸ್ ನಿರ್ಧಾರ ತಪ್ಪಲ್ಲ, ಬದಲಿಗೆ ಇಶಾನ್ ಕಿಶನ್ ಅವರ ಸ್ಫೋಟಕ ಆಟವೇ ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿತು ಎಂದು ಹೇಳಿದ್ದಾರೆ.