ಮೆಸ್ಸಿ, ರೊನಾಲ್ಡೊಗೂ ಸಾಧ್ಯವಾಗದ ಈ ದಾಖಲೆ! ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಹೊಡೆದ ಟಾಪ್​ 5 ಆಟಗಾರರು ಇವರೇ ನೋಡಿ? Top Goal scorers In FIFA World Cup

ಮೆಸ್ಸಿ, ರೊನಾಲ್ಡೊಗೂ ಸಾಧ್ಯವಾಗದ ಈ ದಾಖಲೆ! ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಹೊಡೆದ ಟಾಪ್​ 5 ಆಟಗಾಗರು ಇವರೇ ನೋಡಿ?
ಮೆಸ್ಸಿ, ರೊನಾಲ್ಡೊಗೂ ಸಾಧ್ಯವಾಗದ ಈ ದಾಖಲೆ! ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಹೊಡೆದ ಟಾಪ್​ 5 ಆಟಗಾಗರು ಇವರೇ ನೋಡಿ?
Published on
ನವದೆಹಲಿ: ಜಾಗತಿಕ ಕ್ರೀಡಾ ಲೋಕದ ಮಹಾ ಹಬ್ಬ ಫಿಫಾ ವಿಶ್ವಕಪ್ 2026 ಇಂದಿನಿಂದ (ಜೂನ್, 11) ಅಧಿಕೃತವಾಗಿ ಆರಂಭವಾಗುತ್ತಿದೆ. ಫುಟ್‌ಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ 48 ತಂಡಗಳು ಈ ಬಾರಿಯ ಮಹಾಸಮರದಲ್ಲಿ ಪಾಲ್ಗೊಳ್ಳುತ್ತಿದ್ದು, ಇಡೀ ವಿಶ್ವವೇ ಈ ಐತಿಹಾಸಿಕ ಕ್ಷಣವನ್ನು ಕಣ್ಣುಂಬಿಕೊಳ್ಳಲು ಸಜ್ಜಾಗಿದೆ. ಈ ರೋಚಕ ಪಂದ್ಯಾವಳಿಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಅತಿ ಹೆಚ್ಚು ಗೋಲು ಬಾರಿಸಿ ಜಾಗತಿಕ ದಾಖಲೆ ಬರೆದಿರುವ ಟಾಪ್-5 ಶ್ರೇಷ್ಠ ಆಟಗಾರರ(Top Goal scorers In FIFA World Cup) ರೋಚಕ ವಿವರ ಇಲ್ಲಿದೆ.
ಫುಟ್‌ಬಾಲ್ ಸಾಮ್ರಾಜ್ಯದ ಅತಿ ದೊಡ್ಡ ವೇದಿಕೆಯಲ್ಲಿ ನೂರಾರು ಸ್ಟಾರ್ ಆಟಗಾರರು ಬಂದು ಹೋಗಿದ್ದಾರೆ. ಆದರೆ ಜರ್ಮನಿಯ ದೈತ್ಯ ಆಟಗಾರ ಮಿರೋಸ್ಲಾವ್ ಕ್ಲೋಸ್ ಅವರ ಹೆಸರಲ್ಲಿರುವ ಆ ಒಂದು ದಾಖಲೆಯನ್ನು ಮುರಿಯಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ.

ವಿಶ್ವಕಪ್ ಇತಿಹಾಸದ ಟಾಪ್-5 ಗೋಲು ಸರದಾರರ ಪಟ್ಟಿ ಇಲ್ಲಿದೆ

1. ಮಿರೋಸ್ಲಾವ್ ಕ್ಲೋಸ್ (ಜರ್ಮನಿ) - 16 ಗೋಲುಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಹೆಸರಲ್ಲಿದೆ. ಇವರು 2002 ರಿಂದ 2014 ರವರೆಗೆ ಒಟ್ಟು 4 ವಿಶ್ವಕಪ್ ಟೂರ್ನಿಗಳನ್ನು ಆಡಿದ್ದು, ಬರೋಬ್ಬರಿ 16 ಗೋಲುಗಳನ್ನು ಸಿಡಿಸಿದ್ದಾರೆ. 2014 ರ ವಿಶ್ವಕಪ್‌ನಲ್ಲಿ ಬ್ರೆಜಿಲ್‌ನ ದಿಗ್ಗಜ ರೊನಾಲ್ಡೊ ಅವರ ದಾಖಲೆಯನ್ನು ಮುರಿದ ಕ್ಲೋಸ್, ಅಂದಿನಿಂದ ಇಂದಿನವರೆಗೂ ಅಗ್ರಸ್ಥಾನದಲ್ಲೇ ವಿರಾಜಮಾನರಾಗಿದ್ದಾರೆ.

2. ರೊನಾಲ್ಡೊ (ಬ್ರೆಜಿಲ್)- 15 ಗೋಲುಗಳು

ಫುಟ್‌ಬಾಲ್ ಇತಿಹಾಸದ ಅತ್ಯಂತ ಪ್ರಸಿದ್ಧ ಫಾರ್ವರ್ಡ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್‌ನ ರೊನಾಲ್ಡೊ 15 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2002 ರ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ರೊನಾಲ್ಡೊ ಪ್ರಮುಖ ಕಾರಣವಾಗಿದ್ದರು. ಆ ಒಂದೇ ಟೂರ್ನಿಯಲ್ಲಿ ಅವರು ಭರ್ಜರಿ 8 ಗೋಲುಗಳನ್ನು ಬಾರಿಸಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

3. ಗರ್ಡ್ ಮುಲ್ಲರ್ (ಜರ್ಮನಿ)- 14 ಗೋಲುಗಳು

ಜರ್ಮನಿಯ ಮತ್ತೊಬ್ಬ ಶ್ರೇಷ್ಠ ಫುಟ್‌ಬಾಲ್ ದೈತ್ಯ ಗರ್ಡ್ ಮುಲ್ಲರ್ 14 ಗೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 1974 ರ ವಿಶ್ವಕಪ್‌ನಲ್ಲಿ ಪಶ್ಚಿಮ ಜರ್ಮನಿ ತಂಡ ಟ್ರೋಫಿ ಗೆಲ್ಲುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಮೈದಾನದಲ್ಲಿ ಅತ್ಯಂತ ವೇಗವಾಗಿ ಹಾಗೂ ನಿಖರವಾಗಿ ಗೋಲು ಬಾರಿಸುವ ಚಾಣಾಕ್ಷ ವೃತ್ತಿಪರ ಆಟಗಾರ ಎಂದು ಮುಲ್ಲರ್ ಜಗತ್ಪ್ರಸಿದ್ಧರಾಗಿದ್ದರು.

4. ಜಸ್ಟ್ ಫಾಂಟೈನ್ (ಫ್ರಾನ್ಸ್) - 13 ಗೋಲುಗಳು

ಫ್ರಾನ್ಸ್ ದೇಶದ ಜಸ್ಟ್ ಫಾಂಟೈನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರ ಹೆಸರಲ್ಲಿರುವ ದಾಖಲೆ ಮಾತ್ರ ಇಂದಿಗೂ ಯಾರಿಗೂ ಮುರಿಯಲಾಗದ ರಹಸ್ಯವಾಗಿಯೇ ಉಳಿದಿದೆ. ಫಾಂಟೈನ್ ಕೇವಲ ಒಂದೇ ಒಂದು ವಿಶ್ವಕಪ್ ಟೂರ್ನಿಯಲ್ಲಿ (1958ರ ವಿಶ್ವಕಪ್) ಬರೋಬ್ಬರಿ 13 ಗೋಲುಗಳನ್ನು ಸಿಡಿಸಿ ಈ ಮೈಲಿಗಲ್ಲು ನೆಟ್ಟಿದ್ದರು. ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಇವರ ಈ ದಾಖಲೆ ಆರು ದಶಕಗಳ ಆಚೆಗೂ ಅಖಂಡವಾಗಿದೆ.

5. ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 13 ಗೋಲುಗಳು

ಅರ್ಜೆಂಟೀನಾದ ಜಾದೂಗಾರ್ ಮತ್ತು ಇಂದಿನ ತಲೆಮಾರಿನ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ 13 ಗೋಲುಗಳೊಂದಿಗೆ ಟಾಪ್-5 ಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಗೆದ್ದುಕೊಟ್ಟ ಮೆಸ್ಸಿ, ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net