_1787249768301.webp?w=480&auto=format%2Ccompress&fit=max)
_1787249768301.webp?w=480&auto=format%2Ccompress&fit=max)
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಮೂರನೇ ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ಮೂಲಸೌಕರ್ಯ, ಸಂಪರ್ಕ, ಭದ್ರತೆ, ವಿದೇಶಾಂಗ ವ್ಯವಹಾರಗಳು ಹಾಗೂ ಒಟ್ಟಾರೆ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯ ಕುರಿತು ಈ ಸಭೆಯಲ್ಲಿ ಆಳವಾದ ಹಾಗೂ ವಿಸ್ತೃತ ಚರ್ಚೆ ನಡೆಯಿತು.
ಇಲಾಖಾ ಸೈಲೋಸ್ ಸಂಸ್ಕೃತಿ ಅಂತ್ಯ
ಇಂದಿನ ಯುಗದಲ್ಲಿ ದತ್ತಾಂಶವು ಅತ್ಯಮೂಲ್ಯವಾದ ರಾಷ್ಟ್ರೀಯ ಆಸ್ತಿಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಸರ್ಕಾರದ ವಿವಿಧ ಹಂತಗಳಲ್ಲಿ ಅಪಾರ ಸಂಪನ್ಮೂಲಗಳನ್ನು ಬಳಸಿ ಡೇಟಾ ಸಂಗ್ರಹಿಸಲಾಗುತ್ತಿದ್ದರೂ, ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ವಿವಿಧ ಇಲಾಖೆಗಳ ದತ್ತಾಂಶ ವೇದಿಕೆಗಳು ಪರಸ್ಪರ ಸುಲಭವಾಗಿ ಸಂವಹನ ನಡೆಸುವಂಥ ವ್ಯವಸ್ಥೆ ರೂಪುಗೊಳ್ಳಬೇಕು. ಇದರಿಂದ ಅತ್ಯುತ್ತಮ ನೀತಿ ನಿರೂಪಣೆ ಮಾಡಲು ಮತ್ತು ಲಭ್ಯವಿರುವ ಮಾಹಿತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.