ಅಮೆರಿಕದ 500 ಮಿಲಿಯನ್ ಮೌಲ್ಯದ ಅತ್ಯಾಧುನಿಕ ಯುದ್ಧವಿಮಾನ ಧ್ವಂಸ! 16 ಲಕ್ಷದ ಕಿಲ್ಲರ್ ಡ್ರೋನ್ ಹೊಡೆತಕ್ಕೆ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..? Shahed136

ಅಮೆರಿಕದ 500 ಮಿಲಿಯನ್ ಮೌಲ್ಯದ ವಿಶ್ವದ ಅತ್ಯಾಧುನಿಕ ಯುದ್ಧವಿಮಾನ ಧ್ವಂಸ! 16 ಲಕ್ಷದ ಕಿಲ್ಲರ್ ಡ್ರೋನ್ ಹೊಡೆತಕ್ಕೆ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..?
ಅಮೆರಿಕದ 500 ಮಿಲಿಯನ್ ಮೌಲ್ಯದ ವಿಶ್ವದ ಅತ್ಯಾಧುನಿಕ ಯುದ್ಧವಿಮಾನ ಧ್ವಂಸ! 16 ಲಕ್ಷದ ಕಿಲ್ಲರ್ ಡ್ರೋನ್ ಹೊಡೆತಕ್ಕೆ ಜಗತ್ತೇ ಬೆಚ್ಚಿಬಿದ್ದಿದ್ದೇಕೆ..?
Published on
ಟೆಹ್ರಾನ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಡೇವಿಡ್ ಮತ್ತು ಗೋಲಿಯಾತ್ ನಡುವಿನ ಹೋರಾಟದಂತಹ (Shahed136) ದೃಶ್ಯವೊಂದು ಜರುಗಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ದುಬಾರಿ ವಿಮಾನಗಳಲ್ಲಿ ಒಂದಾದ ಬೋಯಿಂಗ್ E-3 ಸೆಂಟ್ರಿ (AWACS) ಅನ್ನು ಧ್ವಂಸಗೊಳಿಸಿರುವುದಾಗಿ ಘೋಷಿಸಿದೆ. ಈ ಒಂದು ದಾಳಿಯು ಅಮೆರಿಕದ ವಾಯುಪಡೆಯ ಅಹಂಕಾರಕ್ಕೆ ಭಾರಿ ಪೆಟ್ಟು ನೀಡಿದೆ.

ಬಜೆಟ್ ಯುದ್ಧ: $20,000 Vs $500,000,000 ಡಾಲರ್!

ಈ ದಾಳಿಯ ಅತ್ಯಂತ ಆಘಾತಕಾರಿ ಅಂಶವೆಂದರೆ ಹಣದ ಲೆಕ್ಕಾಚಾರವಾಗಿದ್ದು. ಅಮೆರಿಕದ ಈ E-3 ಅವಾಕ್ಸ್ ವಿಮಾನದ ಮೌಲ್ಯ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು ₹4,100 ಕೋಟಿ). ಆದರೆ, ಇದನ್ನು ಹೊಡೆದುರುಳಿಸಲು ಇರಾನ್ ಬಳಸಿದ್ದು ಕೇವಲ 20,000 ಡಾಲರ್ (ಅಂದಾಜು ₹16 ಲಕ್ಷ) ಮೌಲ್ಯದ ಶಾಹೇದ್-136 ಎಂಬ ಕಾಮಿಕಾಜೆ ಡ್ರೋನ್ ಧ್ವಂಸ ಮಾಡಿದೆ.
ಅಂದರೆ, ಅಮೆರಿಕದ ಒಂದು ಅತ್ಯಾಧುನಿಕ ವಿಮಾನದ ಬೆಲೆಯಲ್ಲಿ ಇರಾನ್ ಇಂತಹ ಸಾವಿರಾರು ಡ್ರೋನ್‌ಗಳನ್ನು ತಯಾರಿಸಬಲ್ಲದು. ಅತಿ ಕಡಿಮೆ ವೆಚ್ಚದಲ್ಲಿ ಅತಿ ದೊಡ್ಡ ಹಾನಿ ಮಾಡುವ ಇರಾನ್‌ನ ಈ ತಂತ್ರಗಾರಿಕೆ ಕಂಡು ಜಾಗತಿಕ ಮಿಲಿಟರಿ ತಜ್ಞರು ದಬ್ಬಾಳಿಕೆಗೆ ಒಳಗಾಗಿದ್ದಾರೆ.

ಅಮೆರಿಕದ 'ಕಣ್ಣು' ಕಿತ್ತ ಇರಾನ್!

ಬೋಯಿಂಗ್ E-3 ಸೆಂಟ್ರಿ ಕೇವಲ ಒಂದು ವಿಮಾನವಲ್ಲ, ಇದು ಅಮೆರಿಕದ ವಾಯುಪಡೆಯ ಆಕಾಶದಲ್ಲಿರುವ ಕಣ್ಣಾಗಿತ್ತು. ಇದು ಶತ್ರುಗಳ ಕ್ಷಿಪಣಿಗಳು, ವಿಮಾನಗಳು ಮತ್ತು ಹಡಗುಗಳನ್ನು ನೂರಾರು ಮೈಲಿ ದೂರದಿಂದಲೇ ಪತ್ತೆಹಚ್ಚುವ ಅತ್ಯಾಧುನಿಕ ರೇಡಾರ್ ವ್ಯವಸ್ಥೆಯನ್ನು ಹೊಂದಿದೆ.
ಭಾರಿ ನಷ್ಟ: ಈ ದಾಳಿಯಿಂದಾಗಿ ಅಮೆರಿಕದ ಬಳಿ ಈಗ ಕೇವಲ 16 ಅವಾಕ್ಸ್ ವಿಮಾನಗಳು ಮಾತ್ರ ಉಳಿದಿವೆ ಎಂದು ವರದಿಗಳು ತಿಳಿಸಿವೆ.
ಕಾರ್ಯಾಚರಣೆ ವ್ಯತ್ಯಯ: ಈ ವಿಮಾನದ ನಾಶದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಗುಪ್ತಚರ ಮತ್ತು ವಾಯುಪ್ರದೇಶದ ಕಣ್ಗಾವಲು ವ್ಯವಸ್ಥೆಗೆ ದೊಡ್ಡ ತಡೆಯುಂಟಾಗಿದೆ.

ದಾಳಿ ನಡೆದಿದ್ದು ಹೇಗೆ?

ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ಈ ಶಾಹೇದ್-136 ಡ್ರೋನ್‌ಗಳ ಸಮೂಹವನ್ನು ನುಗ್ಗಿಸಿತ್ತು. ರೇಡಾರ್‌ಗಳ ಕಣ್ಣು ತಪ್ಪಿಸಿ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರುವ ಈ ಡ್ರೋನ್, ನೇರವಾಗಿ ರನ್‌ವೇನಲ್ಲಿ ನಿಂತಿದ್ದ E-3 ವಿಮಾನಕ್ಕೆ ಅಪ್ಪಳಿಸಿದೆ. ಇರಾನ್‌ನ ಈ ಡ್ರೋನ್‌ಗಳನ್ನು ಸೂಸೈಡ್ ಡ್ರೋನ್ ಎಂದೂ ಕರೆಯಲಾಗುತ್ತದೆ, ಏಕೆಂದರೆ ಇವು ಗುರಿಯನ್ನು ತಲುಪಿದ ತಕ್ಷಣ ತಾವೂ ಸ್ಫೋಟಗೊಂಡು ಗುರಿಯನ್ನು ಸರ್ವನಾಶ ಮಾಡುತ್ತವೆ.

ಅಮೆರಿಕದ ರಕ್ಷಣಾ ವ್ಯವಸ್ಥೆಯ ಮೇಲೆ ಪ್ರಶ್ನೆಗಳು

ವಿಶ್ವದ ನಂಬರ್ 1 ಮಿಲಿಟರಿ ಶಕ್ತಿ ಎಂದು ಕರೆಸಿಕೊಳ್ಳುವ ಅಮೆರಿಕದ ರಕ್ಷಣಾ ವ್ಯವಸ್ಥೆಯು ಕೇವಲ 20 ಸಾವಿರ ಡಾಲರ್‌ನ ಸಣ್ಣ ಡ್ರೋನ್ ಅನ್ನು ತಡೆಯಲು ವಿಫಲವಾಗಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಇರಾನ್‌ನ ಈ ನಡೆ ಅಮೆರಿಕಕ್ಕೆ ನೀಡಿದ ಸ್ಪಷ್ಟ ಸಂದೇಶವಾಗಿದ್ದು, ಯುದ್ಧವು ಕೇವಲ ಬೃಹತ್ ಆಯುಧಗಳಿಂದಲ್ಲ, ಬುದ್ಧಿವಂತಿಕೆಯ ತಂತ್ರಗಳಿಂದಲೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದೆ.

ಮುಂದಿನ ಪರಿಣಾಮವೇನು..?

ಈ ಘಟನೆಯ ನಂತರ ಅಮೆರಿಕ ತನ್ನ ಉಳಿದ ಅವಾಕ್ಸ್ ವಿಮಾನಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇತ್ತ ಇರಾನ್, ತನ್ನ ಡ್ರೋನ್ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ. ಈ ಯಶಸ್ಸು ಇರಾನ್ ಬೆಂಬಲಿತ ಹೌತಿ ಮತ್ತು ಹಿಜ್ಬುಲ್ಲಾ ಗುಂಪುಗಳಿಗೆ ಹೆಚ್ಚಿನ ಹುಮ್ಮಸ್ಸು ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಡಿಮೆ ವೆಚ್ಚದ-ಹೆಚ್ಚಿನ ಹಾನಿ ದಾಳಿಗಳು ಹೆಚ್ಚಾಗುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net