2016ರಲ್ಲಿ ಸ್ಥಾಪನೆಯಾದ ಮೊಹೆ, ವೇದಾಂತ್ ಫ್ಯಾಷನ್ಸ್ ಲಿ. ಅಡಿ ಫ್ಯಾಷನ್ ಉಡುಪುಗಳ ಬ್ರ್ಯಾಂಡ್ಗೆ ಆಧುನಿಕ ಸ್ಪರ್ಶ ನೀಡುತ್ತಿದೆ. ದೇಶಾದ್ಯಂತ 170ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಮೊಹೆ, ಬ್ರ್ಯಾಂಡೆಡ್, ಉತ್ತಮ ಗುಣಮಟ್ಟದ ಫ್ಯಾಷನ್ ಉಡುಪುಗಳನ್ನು ಮಾರಾಟ ಮಾಡುತ್ತಿದೆ. ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಮೊಹೆ ಬ್ರ್ಯಾಂಡ್ನ ಲೆಹೆಂಗಾ ಚಿರಪರಿಚಿತವಾಗಿದೆ. ಸೀರೆ, ಸೂಟ್, ಇಂಡೋ-ವೆಸ್ಟರ್ನ್ ಉಡುಪುಗಳಿವೆ. ಆಯಾ ಕಾಲಕ್ಕೆ ತಕ್ಕಂತೆ ವಿನ್ಯಾಸದ ಮೂಲಕ ಉಡುಪು ತಯಾರಿಸುತ್ತಿದೆ.