ಹಣ ಸುರಕ್ಷಿತವಾಗಿದೆ ಎಂಬ ನಂಬಿಕೆಯಲ್ಲಿದ್ದ ರೈತನಿಗೆ, ಅದನ್ನು ಎಲ್ಲಿ ಹೂತಿಟ್ಟಿದ್ದೇನೆ ಎಂಬುದೇ ಮರೆತು ಹೋಗಿತ್ತು. ಕೊನೆಗೆ ವಿಧಿಯಿಲ್ಲದೆ ಅವರು ಈ ವಿಚಾರವನ್ನು ತಮ್ಮ ಮಕ್ಕಳಿಗೆ ತಿಳಿಸಿದ್ದಾರೆ. ನಂತರ ಹಣಕ್ಕಾಗಿ ಕುಟುಂಬಸ್ಥರು ಜಮೀನಿನ ತುಂಬಾ ಅಗೆದು ನೋಡಿದರೂ ದುಡ್ಡು ಮಾತ್ರ ಸಿಕ್ಕಿರಲಿಲ್ಲ. ಇದಾದ ಬಳಿಕ ಮಳೆ ಬಂದು, ಹೊಲ ಊಳುವ ವೇಳೆ ಪಾಲಿಥಿನ್ ಚೀಲವೊಂದು ಮಣ್ಣಿನಿಂದ ಹೊರಬಂದಿತ್ತು. ಆ ಚೀಲವನ್ನು ತೆಗೆದು ನೋಡಿದಾಗ ಮಂಗಿಲಾಲ್ಗೆ ಶಾಕ್ ಕಾದಿತ್ತು.