ನಿದಾ ಖಾನ್ ತಂಗಿದ್ದ ಮನೆಯ ಮಾಲೀಕರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದು, ಮತೀನ್ ಪಟೇಲ್ ಅವರು ತಮ್ಮ ಅತಿಥಿಗಳು ಕೆಲವು ದಿನ ಉಳಿದುಕೊಳ್ಳುತ್ತಾರೆ ಎಂದು ಹೇಳಿ ಮನೆ ಬಾಡಿಗೆಗೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಆದರೆ, ನಿದಾ ಖಾನ್ಗೆ ಆಶ್ರಯ ನೀಡಿದ ಬೆನ್ನಲ್ಲೇ ಈ ಮನೆಯ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಛತ್ರಪತಿ ಸಂಭಾಜಿನಗರ ಮಹಾನಗರ ಪಾಲಿಕೆಯು ಈ ಕಟ್ಟಡವನ್ನು ಅಕ್ರಮ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಮನೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಮೂರು ದಿನಗಳ ಒಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಿದೆ.