ಚೆನ್ನೈ ಸಮೀಪದ ಪಣೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ಈ ಬೃಹತ್ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಎಐಎಡಿಎಂಕೆಯ ಮಾಜಿ ಸಚಿವರಾದ ಎಂ.ಸಿ. ಸಂಪತ್, ಎನ್.ಆರ್. ಶಿವಪತಿ, ಕಡಂಬೂರ್ ಸಿ. ರಾಜು, ಉಡುಮಲೈ ಕೆ. ರಾಧಾಕೃಷ್ಣನ್, ವೆಲ್ಲಮಂಡಿ ಎನ್. ನಟರಾಜನ್, ಮೈಲಾಪುರದ ಮಾಜಿ ಶಾಸಕ ಆರ್. ನಟರಾಜ್, ಪರಮಕುಡಿಯ ಮಾಜಿ ಶಾಸಕ ಸಾಧನ್ ಪ್ರಭಾಕರ್, ಅಣ್ಣಾ ಕಾರ್ಮಿಕ ಸಂಘದ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕಮಲಕ್ಕಣ್ಣನ್, ತಿರುಪತ್ತೂರು ನಗರ ಕಾರ್ಯದರ್ಶಿ ಡಿ.ಟಿ. ಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರು ಸೇರಿದ್ದಾರೆ.