ತಮಿಳುನಾಡು ರಾಜಕೀಯ ಪ್ರಾದೇಶಿಕತೆಯಲ್ಲ, ಬದಲಿಗೆ ತಮಿಳು ವಿಶೇಷತ್ವ; ರಾಜ್ಯಪಾಲ ಆರ್​.ಎನ್​.ರವಿ | R N Ravi

ರಾಜ್ಯಪಾಲ ಆರ್​.ಎನ್​.ರವಿ(R N Ravi)
ರಾಜ್ಯಪಾಲ ಆರ್​.ಎನ್​.ರವಿ(R N Ravi)
Published on
ಚೆನ್ನೈ : ತಮಿಳುನಾಡು ರಾಜಕೀಯವು ಪ್ರಾದೇಶಿಕತೆಯಲ್ಲ, ಅದು ಮೂಲಭೂತವಾಗಿ ತಮಿಳು ಭಾಷೆಯ ವಿಶೇಷತ್ವ ಆಗಿದ್ದು, ಅದು ಇತರೆ ಭಾಷೆಗಳಿಗಿಂತ ವಿಭಿನ್ನ ಎಂಬುದನ್ನು ಒತ್ತಾಯಿಸುತ್ತದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್​.ರವಿ(R N Ravi) ಹೇಳಿದ್ದಾರೆ.
ಖಾಸಗಿ ಚಾನಲ್​ನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ತಮಿಳು ಭಾಷೆಯ ವಿಶೇಷತ್ವವು ತೆಲುಗು, ಕನ್ನಡ ಹಾಗೂ ಮಲಯಾಳಂನಂತಹ ದ್ರಾವಿಡ ಕುಟುಂಬಕ್ಕೆ ಸೇರಿದ ಭಾಷೆಗಳ ವಿರುದ್ಧದ ದ್ವೇಷದಿಂದ ವ್ಯಕ್ತವಾಗುತ್ತದೆ. ಕೇವಲ ಹಿಂದಿ ವಿರುದ್ಧ ಅಲ್ಲ ಎಂದಿದ್ದಾರೆ.
ತಮಿಳು ರಾಜಕಾರಣಿಗಳು ತಮಿಳು ಭಾಷೆಯನ್ನು ನಿಜವಾಗಿಯೂ ಪ್ರೀತಿಸುವುದಿಲ್ಲ, ಯಾಕೆಂದರೆ ಅವರು ತಮಿಳು ಭಾಷೆ ಅಥವಾ ತಮಿಳು ಸಂಸ್ಕೃತಿಯ ಪ್ರಚಾರಕ್ಕಾಗಿ ಏನನ್ನೂ ಮಾಡಿಲ್ಲ ಎಂದು ಇದೇ ವೇಳೆ ತಮಿಳುನಾಡಿನ ರಾಜಕಾರಣಿಗಳನ್ನು ಟೀಕಿಸಿದ್ದಾರೆ.
ವಾಸ್ತವವಾಗಿ ಪ್ರತಿ ವರ್ಷ ವಿದ್ಯಾರ್ಥಿಗಳು ತಮಿಳು ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೋಗುತ್ತಿದ್ದಾರೆ. ತಮಿಳು ಭಾಷೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸ್ಥಿರವಾಗಿ ಮತ್ತು ತೀವ್ರವಾಗಿ ಕಡಿಮೆಯಾಗುತ್ತಿದೆ. ತಮಿಳುನಾಡು ಸರ್ಕಾರ ತಮಿಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಸಂಶೋಧನೆಗೆ ಶೂನ್ಯ ಬಜೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಆರ್ಕೈವ್‌ನಲ್ಲಿ 11 ಲಕ್ಷಕ್ಕೂ ಹೆಚ್ಚು ತಾಳೆಗರಿಗಳ ಹಸ್ತಪ್ರತಿಗಳು ಕೊಳೆಯುತ್ತಿವೆ. ಅವುಗಳ ಸಂರಕ್ಷಣೆಗಾಗಿ ಯಾವುದೇ ಹಣವನ್ನು ನಿಗದಿಪಡಿಸಲಾಗಿಲ್ಲ ಎಂದು ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
2024ರಲ್ಲಿ ದೂರ ದರ್ಶನದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ರಾಜ್ಯಗೀತೆ ‘ತಮಿಳು ಥಾಯ್ ವಾಳ್ತು’ ಬಗ್ಗೆ ಉಂಟಾದ ವಿವಾದದ ಬಗ್ಗೆ ಮಾತನಾಡಿದ ಅವರು, ಡಿಎಂಕೆ ನೇತೃತ್ವದ ಸರ್ಕಾರ ಯಾವುದಕ್ಕೆ ಗದ್ದಲ ಮಾಡಿಲ್ಲ ಹೇಳಿ, ಅಲ್ಲಿ ದ್ರಾವಿಡ ಎಂಬ ಪದವನ್ನು ಬಿಟ್ಟು ರಾಜ್ಯಗೀತೆಯನ್ನು ಹಾಡಲಾಯಿತು ಎಂದು ಹೇಳ್ತಾರೆ. ಆ ಕಾರ್ಯಕ್ರಮದಲ್ಲಿ ನಾನು ಕೇವಲ ಅತಿಥಿಯಾಗಿದ್ದೆ, ಅದು ಸಂಘಟಕರ ತಪ್ಪು, ಬಳಿಕ ಅದರ ಬಗ್ಗೆ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ.

ವಾಸ್ತವವಾಗಿ ತಮಿಳು ಬಗ್ಗೆ ಮಾತನಾಡುವ ಅನೇಕ ಜನರಿಗಿಂತ ನಾನು ತಮಿಳು ಥಾಯ್ ವಳ್ತುವನ್ನು ಚೆನ್ನಾಗಿ ಹಾಡಬಲ್ಲೆ ಎಂದು ಆರ್​.ಎನ್.ರವಿ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net