Donald Trump | ಸಿಡ್ನಿ ಬೋಂಡಿ ಬೀಚ್‌ ಗುಂಡಿನ ದಾಳಿ; ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಜಗತ್ತು ಒಂದಾಗಬೇಕು ಎಂದ ಡೊನಾಲ್ಡ್ ಟ್ರಂಪ್

Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(
Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(
Published on
ನ್ಯೂಯಾರ್ಕ್: ಇಸ್ಲಾಂ ಮೂಲಭೂತವಾದದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಂತೆ ಜಗತ್ತಿನ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬುಧವಾರ (ಡಿ.17) ಕರೆ ನೀಡಿದ್ದಾರೆ.
ಈ ಬಗ್ಗೆ ಯಹೂದಿ ಅಮೆರಿಕನ್ನರಿಗಾಗಿ ಶ್ವೇತಭವನದ ಹನುಕ್ಕಾ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್​, ವಿಶ್ವದ ಎಲ್ಲ ರಾಷ್ಟ್ರಗಳು ಇಸ್ಲಾಮಿಕ್ ಭಯೋತ್ಪಾದನೆಯ ದುಷ್ಟಶಕ್ತಿಗಳ ವಿರುದ್ಧ ಒಟ್ಟಾಗಿ ನಿಲ್ಲಬೇಕು. ಅಲ್ಲದೆ, ನಾವು ಇದನ್ನೇ ಮಾಡುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಯಹೂದಿ ಹನುಕ್ಕಾ ಉತ್ಸವದಲ್ಲಿ 15 ಜನರು ಗುಂಡು ಹಾರಿಸಿ ಕೊಲ್ಲಲ್ಪಟ್ಟ ಕೆಲವು ದಿನಗಳ ನಂತರ ಈ ಪ್ರತಿಕ್ರಿಯೆ ಬಂದಿದೆ.
ನಮ್ಮ ಇಡೀ ರಾಷ್ಟ್ರಕ್ಕೆ, ಆಸ್ಟ್ರೇಲಿಯಾದ ಜನರಿಗೆ, ಮತ್ತು ವಿಶೇಷವಾಗಿ ಭಯಾನಕ ಮತ್ತು ಯೆಹೂದ್ಯ ವಿರೋಧಿ ಭಯೋತ್ಪಾದಕ ದಾಳಿಯಿಂದ ಪ್ರಭಾವಿತರಾದ ಎಲ್ಲರಿಗೂ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಭಾನುವಾರ ಸಂಜೆ ಸಿಡ್ನಿಯ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ನಡೆದ ಯಹೂದಿ ಉತ್ಸವದ ಮೇಲೆ ಸಾಜಿದ್ ಅಕ್ರಮ್ ಮತ್ತು ಮಗ ನವೀದ್ ಗುಂಡಿನ ದಾಳಿಯಲ್ಲಿ 15ಜನರನ್ನು ಹತ್ಯೆ ಮಾಡಿದರು.

ಬೋಂಡಿ ಬೀಚ್‌ ದಾಳಿಯ ಬಗ್ಗೆ ಆಸ್ಟ್ರೇಲಿಯಾದ ಪಿಎಂ ಹೇಳಿದ್ದೇನು..?

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಈ ಘಟನೆಗೆ ಇಸ್ಲಾಂ ಮೂಲಭೂತವಾದವೇ ಸಮಸ್ಯೆಯ ಮೂಲ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಂಥೋನಿ ಅಲ್ಬನೀಸ್, ದಾಳಿಯು ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳಿಂದ ಪ್ರೇರಿತವಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೆ, ಸ್ಥಳದಲ್ಲಿ ವಶಪಡಿಸಿಕೊಂಡ ವಾಹನದಲ್ಲಿ ಇಸ್ಲಾಮಿಕ್ ಸ್ಟೇಟ್ ಧ್ವಜಗಳು ಕಂಡುಬಂದಿವೆ. ಇದು ಈ ಮೂಲಭೂತ ಮತ್ತು ವಿಕೃತ ಸಿದ್ಧಾಂತವನ್ನು ಸೂಚಿಸುತ್ತದೆ. ಇಸ್ಲಾಂ ಹೆಸರಿನಲ್ಲಿ ಹರಡುತ್ತಿರುವ ಈ ಹಿಂಸಾತ್ಮಕ ಸಿದ್ಧಾಂತವು ಗಂಭೀರ ಸಮಸ್ಯೆಯಾಗಿದ್ದು, ಇದನ್ನು ವಿಶ್ವಾದ್ಯಂತ ಗುರುತಿಸಲಾಗಿದೆ ಎಂದಿದ್ದಾರೆ. ಐಸಿಸ್ ಅತ್ಯಂತ ಅಪಾಯಕಾರಿ ಮತ್ತು ದುಷ್ಟ ಸಿದ್ಧಾಂತದಿಂದ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಇದನ್ನು ಆಸ್ಟ್ರೇಲಿಯಾ ಸರ್ಕಾರ ಮಾತ್ರವಲ್ಲದೆ ಜಾಗತಿಕವಾಗಿಯೂ ಖಂಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net