ಕೇರಳದ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಸೋನಿಯಾ ಗಾಂಧಿ | Sonia Gandhi

ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಮತ್ತು ಸೋನಿಯಾ ಗಾಂಧಿ
ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಮತ್ತು ಸೋನಿಯಾ ಗಾಂಧಿ
Published on
ತಿರುವನಂತಪುರಂ: ಕೇರಳದಲ್ಲಿ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ(Sonia Gandhi) ಹೆಸರಿನ್ನಿಟ್ಟುಕೊಂಡಿರುವ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಮುನ್ನಾರ್​​ ಪಂಚಾಯತ್​ನ ನಲ್ಲತನ್ನಿ ಎಂಬ ವಾರ್ಡ್​ನಲ್ಲಿ ಸ್ಪರ್ಧಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿರುವ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯ ಹೆಸರಿನ್ನಿಡಲಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡ ದೊರೆರಾಜ್ ಅವರ ಪುತ್ರಿ. ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ಮೇಲಿನ ಅಭಿಮಾನದಿಂದ ಅವರು ತಮ್ಮ ಪುತ್ರಿಗೆ ಸೋನಿಯಾ ಗಾಂಧಿ ಎಂಬ ಹೆಸರಿಟ್ಟಿದ್ದಾರೆ ಎಂದು ಮಲಯಾಳಂ ಮನೋರಮಾ ವರದಿ ಮಾಡಿದೆ.
ಆದರೆ ಸೋನಿಯಾ ಅವರ ವಿವಾಹವು ಅವರ ಪಕ್ಷವನ್ನೂ ಬದಲಾಯಿಸಿದೆ. ಅವರ ಪತಿ ಸುಭಾಷ್ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಓಲ್ಡ್ ಮುನ್ನಾರ್ ಮುಲಕ್ಕಾಡ್‌ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಲಾನಂತರದಲ್ಲಿ ಸೋನಿಯಾ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ನಲ್ಲತನ್ನಿ ವಾರ್ಡ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಬಿಜೆಪಿಯ ಸೋನಿಯಾ ಗಾಂಧಿಗೆ ಎದುರಾಗಿ ಕಾಂಗ್ರೆಸ್​ನಿಂದ ಮಂಜುಳಾ ರಮೇಶ್ ಮತ್ತು ಸಿಪಿಐ(ಎಂ)ನ ವಲರಮತಿ ಸ್ಪರ್ಧಿಗಳಾಗಿದ್ದಾರೆ. ಕೂತುಹಲಕಾರಿ ಎಂದರೆ ಕಾಂಗ್ರೆಸ್ ಹಿರಿಯ ನಾಯಕಿಯ ಹೆಸರಿನ ಅಭ್ಯರ್ಥಿ, ಅದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಎದುರಿಸುತ್ತಿದ್ದಾರೆ.
ಕೇರಳ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಡಿ. 9 ಮತ್ತು 11 ರಂದು ನಡೆಯಲಿವೆ. ರಾಜ್ಯದ 941 ಗ್ರಾಮ ಪಂಚಾಯತ್‌ಗಳು, 152 ಬ್ಲಾಕ್ ಪಂಚಾಯತ್‌ಗಳು, 14 ಜಿಲ್ಲಾ ಪಂಚಾಯತ್‌ಗಳು, 87 ಪುರಸಭೆಗಳು ಮತ್ತು ಆರು ನಿಗಮಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ. 13ರಂದು ಮತಎಣಿಕೆ ನಡೆಯಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net