ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ಸಿಂಗ್, ಸಿಂಧಿ ಹಿಂದೂಗಳು ಎಲ್.ಕೆ. ಅಡ್ವಾಣಿಯಂತಹ ನಾಯಕರ ಪೀಳಿಗೆಯವರು, ಸಿಂಧ್ ಪ್ರದೇಶವನ್ನು ಭಾರತದಿಂದ ಬೇರ್ಪಡಿಸುವುದನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಸಿಂಧ್ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧೂ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್ನ ಅನೇಕ ಮುಸ್ಲಿಮರು ಸಿಂಧೂ ನದಿಯ ನೀರು ಮೆಕ್ಕಾದ ಆಬ್-ಎ-ಜಮ್ಜಮ್ ನೀರಿನಷ್ಟೆ ಪವಿತ್ರವೆಂದು ಭಾವಿಸಿದ್ದಾರೆ, ಇದು ಅಡ್ವಾಣಿ ಅವರ ಉಲ್ಲೇಖ ಎಂದು ಹೇಳಿದರು.