ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿರುವ ಭೂಪೇನ್ ಬೋರಾ, ಸ್ವಾಭಿಮಾನಿ ಅಸ್ಸಾಮಿಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ನಲ್ಲಿ 700 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ 100 ಜನಕ್ಕೆ ಟಿಕೆಟ್ ಸಿಗಲಿದೆ. ಇನ್ನುಳಿದ 600 ಮುಖಂಡರು ಬಿಜೆಪಿಗೆ ಬರುತ್ತಾರೆ ಎಂದು ಹೇಳಲ್ಲ. ಆದರೆ ರಾಜೀವ್ ಭವನದ ಸ್ವಾಭಿಮಾನಿ ಅಸ್ಸಾಮಿಗಳು ವಾಜಪೇಯಿ ಭವನಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.