ಬರ್ಲಾ? ಬೇಡ್ವಾ? ನೀವೇ ಹೇಳಿ... ನಟ ರಾಘವ ಲಾರೆನ್ಸ್ ರಾಜಕೀಯ ಭವಿಷ್ಯ ಇದೀಗ ಅಭಿಮಾನಿಗಳ ಕೈಯಲ್ಲಿ! Raghava Lawrence

ಬರ್ಲಾ? ಬೇಡ್ವಾ? ನೀವೇ ಹೇಳಿ... ನಟ ರಾಘವ ಲಾರೆನ್ಸ್ ರಾಜಕೀಯ ಭವಿಷ್ಯ ಇದೀಗ ಅಭಿಮಾನಿಗಳ ಕೈಯಲ್ಲಿ! Raghava Lawrence
ಬರ್ಲಾ? ಬೇಡ್ವಾ? ನೀವೇ ಹೇಳಿ... ನಟ ರಾಘವ ಲಾರೆನ್ಸ್ ರಾಜಕೀಯ ಭವಿಷ್ಯ ಇದೀಗ ಅಭಿಮಾನಿಗಳ ಕೈಯಲ್ಲಿ! Raghava Lawrence
Published on

ಪ್ರಮುಖ ಮುಖ್ಯಾಂಶಗಳು

  • ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ನಟ ರಾಘವ ಲಾರೆನ್ಸ್ ಸ್ಪರ್ಧೆ ವದಂತಿ
  • ಟಿವಿಕೆ ಪಕ್ಷದಿಂದ ಸ್ಪರ್ಧೆ ಮಾಡುತ್ತಾರಾ? ಕೊನೆಗೂ ವದಂತಿಗಳಿಗೆ ಪ್ರತಿಕ್ರಿಯಿಸಿದ ರಾಘವ ಲಾರೆನ್ಸ್​
  • ರಾಜಕೀಯ ಪ್ರವೇಶದ ಅಂತಿಮ ನಿರ್ಧಾರವನ್ನು ತಮ್ಮ ಅಭಿಮಾನಿಗಳಿಗೆ ಬಿಟ್ಟ ಖ್ಯಾತ ನಟ
Raghava Lawrence : ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವರದಿಗಳಿಗೆ ನಟ, ನಿರ್ದೇಶಕ ಹಾಗೂ ಸಾಮಾಜಿಕ ಹೋರಾಟಗಾರ ರಾಘವ ಲಾರೆನ್ಸ್ ಪ್ರತಿಕ್ರಿಯಿಸಿದ್ದು, ರಾಜಕೀಯ ಪ್ರವೇಶದ ಅಂತಿಮ ನಿರ್ಧಾರವನ್ನು ತಮ್ಮ ಅಭಿಮಾನಿಗಳಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಲಾರೆನ್ಸ್​ ಅವರು, ಒಂದು ವೇಳೆ ತಮ್ಮ ಅಭಿಮಾನಿಗಳು ಒಪ್ಪಿಗೆ ನೀಡಿ, ರಾಜಕೀಯಕ್ಕೆ ಬರಲು ಸೂಚಿಸಿದರೆ ತಾವು ಚುನಾವಣಾ ಕಣಕ್ಕಿಳಿಯಲು ಹಾಗೂ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ಸಿದ್ಧರಾಗಿರುವುದಾಗಿ ಲಾರೆನ್ಸ್​ ಸ್ಪಷ್ಟಪಡಿಸಿದ್ದಾರೆ.
ನಾನು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬ ವರದಿಗಳು ವಿವಿಧ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಕುರಿತು ಸ್ಪಷ್ಟನೆ ಕೋರಿ ಮಾಧ್ಯಮ ಮಿತ್ರರು ನನಗೆ ನಿರಂತರವಾಗಿ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ ಹಾಗೂ ಭೇಟಿಯಾಗಲು ವಿನಂತಿಸುತ್ತಿದ್ದಾರೆ. ಈ ವದಂತಿಗಳು ಮತ್ತು ಊಹಾಪೋಹಗಳು ಈಗ ತೀರಾ ಹೆಚ್ಚಾಗಿರುವ ಕಾರಣ, ಇದಕ್ಕೆ ಅಧಿಕೃತವಾಗಿ ತೆರೆ ಎಳೆಯಲು ಮತ್ತು ಸತ್ಯಾಸತ್ಯತೆಯನ್ನು ಹಂಚಿಕೊಳ್ಳಲು ನಾನು ಈ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ರಾಘವ ಲಾರೆನ್ಸ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ವಿಡಿಯೋವನ್ನು ನೋಡಿದ ನಂತರ ದಯವಿಟ್ಟು ನನಗೆ ನಿಮ್ಮ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ. ಒಂದು ವೇಳೆ ನೀವೆಲ್ಲರೂ 'ಬೇಡ' ಎಂದು ಹೇಳಿದರೆ, ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಬದಲಿಗೆ ಸಮಾಜಕ್ಕೆ ನನ್ನ ನಿಸ್ವಾರ್ಥ ಸೇವೆಯನ್ನು ಹೀಗೆಯೇ ಮುಂದುವರಿಸುತ್ತೇನೆ. ಆದರೆ, ನೀವು 'ಹೌದು' ಎಂದು ಗ್ರೀನ್ ಸಿಗ್ನಲ್ ನೀಡಿದರೆ, ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನಿಷ್ಟದ ನಾಯಕನ ಜೊತೆಗೂಡಿ ಈ ರಾಜಕೀಯ ಪ್ರಯಾಣವನ್ನು ಆರಂಭಿಸಲು ನಾನು ಸಂಪೂರ್ಣ ಸಿದ್ಧನಾಗಿದ್ದೇನೆ ಎಂದು ರಾಘವ ಲಾರೆನ್ಸ್ ಆ ವಿಡಿಯೋದಲ್ಲಿ ಅಭಿಮಾನಿಗಳಿಗೆ ಮುಕ್ತವಾಗಿ ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅವರು ಸ್ಪರ್ಧಿಸಿ ಗೆದ್ದಿದ್ದ ಎರಡು ಕ್ಷೇತ್ರಗಳ ಪೈಕಿ ತಿರುಚಿರಾಪಳ್ಳಿ (ತ್ರಿಚಿ) ಪೂರ್ವ ಕ್ಷೇತ್ರವೂ ಒಂದಾಗಿದೆ. ಆ ಬಳಿಕ ವಿಜಯ್ ಅವರು ಪೆರಂಬೂರ್ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಂಡು, ತಿರುಚಿರಾಪಳ್ಳಿ ಕ್ಷೇತ್ರವನ್ನು ತೆರವುಗೊಳಿಸಲು ನಿರ್ಧರಿಸಿದ್ದರಿಂದ ಈ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ಎದುರಾಗಿದೆ. ಆರಂಭದಲ್ಲಿ ಈ ಕ್ಷೇತ್ರದಿಂದ ವಿಜಯ್ ಅವರ ಪಕ್ಷದ ಅಭ್ಯರ್ಥಿಯಾಗಿ ಖ್ಯಾತ ನಟಿ ತ್ರಿಷಾ ಕಣಕ್ಕಿಳಿಯಲಿದ್ದಾರೆ ಎಂಬ ಭಾರಿ ವದಂತಿಗಳು ಹರಿದಾಡಿದ್ದವು.
ಆದರೆ, ಇತ್ತೀಚಿನ ದಿನಗಳಲ್ಲಿ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಅವರ ಹೆಸರು ಟಿವಿಕೆ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಮುಂಚೂಣಿಗೆ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಪ್ರಚಾರ ಹಾಗೂ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸ್ವತಃ ರಾಘವ ಲಾರೆನ್ಸ್ ಅವರೇ ಈಗ ಅಧಿಕೃತವಾಗಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡುವ ಮೂಲಕ ಮಾಧ್ಯಮಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net