ಸಾಮಾನ್ಯ ಗಾಸಿಪ್ಗಳನ್ನು ತಿಳಿಸಲು ಅವರು 5,000 ದಿಂದ 10,000 ಕೊಲಂಬಿಯನ್ ಪೆಸೊಗಳವರೆಗೆ (ಸುಮಾರು 150 ರಿಂದ 200 ರೂಪಾಯಿ) ಶುಲ್ಕ ವಿಧಿಸಿದರೆ, ದೊಡ್ಡ ಕುಟುಂಬದ ರಹಸ್ಯಗಳಿಗೆ ಸುಮಾರು 7,00,000 ಪೆಸೊಗಳವರೆಗೆ (ಸುಮಾರು 14,700 ರೂಪಾಯಿ) ಅಥವಾ ಅದಕ್ಕಿಂತ ಹೆಚ್ಚಿನ ದರವನ್ನು ಪಡೆಯುತ್ತಾರೆ. ವಿಶೇಷವೆಂದರೆ, ತಮ್ಮ ಗುಟ್ಟುಗಳು ಹೊರಬಾರದಂತೆ ತಡೆಯಲು ಕೆಲವರು ಹಣ ನೀಡಿ ರಹಸ್ಯಗಳನ್ನು ಮುಚ್ಚಿಡುವಂತೆ ಮಾಡುತ್ತಾರೆ ಎಂದು ಮರಿಯಮ್ ಬಹಿರಂಗಪಡಿಸಿದ್ದಾರೆ.