ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್: ಗಾನ ಕೋಗಿಲೆಯ ಅವತಾರದಲ್ಲಿ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ನಟನೆ | Sai Pallavi
ನಟಿ ಸಾಯಿ ಪಲ್ಲವಿ
Published on:
Copied
Follow Us
ಬಾಲಿವುಡ್: ಸರಳ ನಟನೆ ಮತ್ತು ನ್ಯಾಚುರಲ್ ಬ್ಯೂಟಿಯಿಂದಲೇ ಸೌತ್ ಸಿನಿಮಾ ರಂಗದಲ್ಲಿ ತನ್ನದೇ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿರುವ ನಟಿ ಸಾಯಿ ಪಲ್ಲವಿ, ರಾಮಾಯಣ ಸಿನಿಮಾ ಬಳಿಕ ಮತ್ತೊಂದು ದೊಡ್ಡ ಬಜೆಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅದು ಒಬ್ಬ ಖ್ಯಾತ ಮಹಿಳಾ ಸಾಧಕಿಯ ಬಯೋಫಿಕ್ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ಹಂಗಾಮ ವರದಿ ಪ್ರಕಾರ, ಭಾರತ ರತ್ನ, ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ. ನಿರ್ದೇಶಕ ಗೌತಮ್ ತಿನ್ನನುರಿ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕೆ ಸಿದ್ದರಾಗಲು ನಟಿ ಕರ್ನಾಟಕ ಸಂಗೀತ ಪಾಠ ಕಲಿಯಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
ನಿರ್ದೇಶಕ ಗೌತಮ್ ಈ ವಿಷಯದ ಬಗ್ಗೆ ತನ್ನ ಸಂಶೋಧನೆಯನ್ನು ನಡೆಸುತ್ತಿದ್ದು, ನಟಿ ಸಾಯಿ ಪಲ್ಲವಿ, ಗಾಯಕಿ ಸುಬ್ಬುಲಕ್ಷ್ಮಿ ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಅವರ ಎಲ್ಲಾ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಬಹುಷಃ ಸಿನಿಮಾ ಈ ವರ್ಷದ ಕೊನೆಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಆದ್ಯಾಗೂ ಈ ಬಗ್ಗೆ ನಿರ್ಮಾಪಕರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಯಾರೂ ಎಂ.ಎಸ್.ಸುಬ್ಬುಲಕ್ಷ್ಮಿ?
ಕರ್ನಾಟಕ ಸಂಗೀತ ಮತ್ತು ಭಕ್ತಿ ಸಂಗೀತದಲ್ಲಿ ತಮ್ಮದೇ ಹೆಸರು ಮಾಡಿರುವ ಎಂ.ಎಸ್.ಸುಬ್ಬುಲಕ್ಷ್ಮಿಯವರು ತಮಿಳುನಾಡಿನ ಮಧುರೈ ಮೂಲದವರು. ಕೇವಲ 10ನೇ ವಯಸ್ಸಿನಲ್ಲಿ ಮರಗತ ವಡಿವು ಎಂಬ ತಮಿಳು ಹಾಡಿನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮದ್ರಾಸ್ ಸಂಗೀತ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಹಾಡಿದ ಮೊದಲ ಮಹಿಳೆ ಹೆಗ್ಗಳಿಕೆ ಅವರದು.
1998ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದ ಮೊದಲ ಸಂಗೀತಗಾರ್ತಿ. ಹಿಂದಿ, ತೆಲುಗು, ಬಂಗಾಳಿ, ಗುಜರಾತಿ, ಸಂಸ್ಕೃತ ಹಾಗೂ ಉರ್ದು ಸೇರಿದಂತೆ ಬಹು ಭಾಷೆಗಳ ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿದ್ದಾರೆ.
ಸಾಲು-ಸಾಲು ಚಿತ್ರದಲ್ಲಿ ಸಾಯಿ ಪಲ್ಲವಿ
ಇನ್ನೂ ಸಾಯಿ ಪಲ್ಲವಿ ಸಾಲು-ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮೇ 01ರಂದು ಅವರ ಮೊದಲ ಹಿಂದಿ ಸಿನಿಮಾ, ಅಮಿರ್ ಖಾನ್ ಪುತ್ರ ಜೈದ್ ಖಾನ್ ಜೊತೆ ನಟಿಸಿರುವ ಏಕ್ ದಿನ್ ಸಿನಿಮಾ ಬಿಡುಗಡೆಯಾಗಲಿದೆ. ಹಾಗೆಯೇ ನಿತೇಶ್ ತಿವಾರಿ ನಿರ್ಮಾಣದ ಹಿಂದಿ ರಾಮಾಯಣ ಸಿನಿಮಾದಲ್ಲೂ ಸೀತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಮಾರಿ2 ಬಳಿಕ 2ನೇ ಬಾರಿ ನಟ ಧನುಷ್ ಅವರ 55ನೇ ಚಿತ್ರವನ್ನು ಸೇರಿಕೊಂಡಿದ್ದಾರೆ (ಏಜೆನ್ಸೀಸ್).