ಈ ಬಗ್ಗೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಪುಟಿನ್ ಅವರು ಇರಾನ್‌ನ ಸಂವರ್ಧಿತ ಯುರೇನಿಯಂ ಅನ್ನು ರಷ್ಯಾಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ವಾಷಿಂಗ್ಟನ್ ಮತ್ತು ಇತರ ಪ್ರಾದೇಶಿಕ ನಾಯಕರಿಗೆ ನೇರವಾಗಿ ತಿಳಿಸಿದ್ದಾರೆ. ಈ ಮೂಲಕ ಇರಾನ್‌ನ ಪರಮಾಣು ಚಟುವಟಿಕೆಗಳ ಬಗ್ಗೆ ಅಮೆರಿಕಕ್ಕೆ ಇರುವ ಆತಂಕವನ್ನು ದೂರ ಮಾಡಬಹುದು ಮತ್ತು ಸಂಘರ್ಷಕ್ಕೆ ಪೂರ್ಣವಿರಾಮ ಇಡಬಹುದು ಎಂದು ಹೇಳಿದ್ದಾರೆ. ಜಗತ್ತಿನ ಅತಿ ದೊಡ್ಡ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ರಷ್ಯಾ, ಈ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಉತ್ಸುಕವಾಗಿದೆ.