ನವದೆಹಲಿ: ಭಾರತ ತಂಡ 2026ರ ಟಿ20 ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಂಡು ಇತಿಹಾಸ ಬರೆದಿದ್ದು, ಈ ಐತಿಹಾಸಿಕ ಗೆಲುವಿನ ಹಿಂದೆ ಯುವ ಬ್ಯಾಟರ್ ರಿಂಕು ಸಿಂಗ್ರ (Rinku Singh) ವೈಯಕ್ತಿಕ ತ್ಯಾಗ ಮತ್ತು ನೋವಿನ ಕಥೆಯಿದೆ. ಟೂರ್ನಿಯ ಮಧ್ಯದಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ರಿಂಕು, ಈಗ ವಿಶ್ವಕಪ್ ಗೆದ್ದ ಬಳಿಕ ತಮ್ಮ ತಂದೆ ಖಾನ್‌ಚಂದ್ ಸಿಂಗ್ಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.