ಭಾನುವಾರ (ಜ.25) ನಡೆದ ಈ ಸಾಹಸಮಯ ಘಟನೆಯಲ್ಲಿ, ಹನ್ನೋಲ್ಡ್ ಕೇವಲ 90 ನಿಮಿಷಗಳಲ್ಲಿ 101 ಅಂತಸ್ತಿನ ಈ ಬೃಹತ್ ಕಟ್ಟಡದ ಶಿಖರವನ್ನು ತಲುಪಿದ್ದಾರೆ. ಸಾಮಾನ್ಯವಾಗಿ ಇಂತಹ ಸಾಹಸಗಳನ್ನು ಮಾಡುವವರು ಕ್ಲೈಂಬಿಂಗ್ ರೋಪ್ ಹಾಗೂ ಇತರೆ ಸುರಕ್ಷತಾ ಕವಚಗಳನ್ನು ಬಳಸುತ್ತಾರೆ. ಆದರೆ ಅಲೆಕ್ಸ್ ಹನ್ನೋಲ್ಡ್ ಕೇವಲ ತಮ್ಮ ದೈಹಿಕ ಬಲ ಮತ್ತು ಅದ್ಭುತ ಏಕಾಗ್ರತೆಯ ಮೇಲೆ ನಂಬಿಕೆಯಿಟ್ಟು ಈ ಫ್ರೀ ಸೋಲೋ ಸಾಹಸಕ್ಕೆ ಕೈಹಾಕಿದ್ದರು.