16ರಿಂದ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮಾಹಿತಿ

ಸಾಧಾರಣ ಮಳೆ
ಸಾಧಾರಣ ಮಳೆ
Published on
ಬೆಂಗಳೂರು: ರಾಜ್ಯದ ಹಲವೆಡೆ ಬಿಸಿಲಿನ ಬೇಗೆ ಹೆಚ್ಚಳವಾಗಿರುವ ನಡುವೆಯೂ ಮಾ.16ರಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಾ.16ರಿಂದ ಮಾ.20 ರವರೆಗೆ ಮಳೆಯಾಗಲಿದೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ವಿಜಯಪುರದಲ್ಲಿ ಮಾ.18ರಿಂದ ಮುಂದಿನ 3 ದಿನ ತುಂತುರು ವರ್ಷಧಾರೆಯಾಗಲಿದೆ. ಉಳಿದೆಡೆ ಒಣಹವೆ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಉಷ್ಣಾಂಶ ಏರಿಕೆ:
ಬೇಸಿಗೆ ಶುರುವಾಗಿ 2 ವಾರವಾಗಿದೆ.ಹಲವೆಡೆ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿದೆ. ಹೊನ್ನಾವರ, ಕಾರವಾರ, ಮಂಗಳೂರು, ಧಾರವಾಡ, ಗದಗ, ಕಲಬುರಗಿ, ಬೀದರ್ ಮತ್ತು ಬೆಳಗಾವಿಯಲ್ಲಿ ವಾಡಿಕೆಗಿಂತ 2-3 ಡಿ.ಸೆ. ಹೆಚ್ಚಳವಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಕಡಿಮೆ ಶಾಖದ ಅಲೆ, ಬೆಚ್ಚಗಿನ ರಾತ್ರಿ ಇರಲಿದೆ. ಕರಾವಳಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಶೇ.65 ಹೆಚ್ಚಿರಲಿದೆ. ಬೆಂಗಳೂರು ನಗರ ಸೇರಿ ಕೆಲ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಬಿಸಿ ವಾತಾವರಣ ಇರಲಿದೆ.ಮೇವರೆಗೆ ತಾಪಮಾನ ಸಾಮಾನ್ಯಗಿಂತ ಕಠಿಣವಾಗಿರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net