ತಮ್ಮ ಎಕ್ಸ್ ಖಾತೆಯಲ್ಲಿ ಲೋಕಸಭೆಯಲ್ಲಿನ ತಮ್ಮ ಭಾಷಣದ ಕ್ಲಿಪ್ ಹಂಚಿಕೊಂಡಿರುವ ರಾಹುಲ್, ಚುನಾವಣಾ ಕಾನೂನುಗಳಿಗೆ ಸಂಬಂಧಪಟ್ಟ ಇತ್ತೀಚಿನ ತಿದ್ದುಪಡಿಗಳ ಕುರಿತು ಮೂರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆಯೋಗದ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದುಹಾಕುವುದು, 2024 ರ ಚುನಾವಣೆಗೆ ಮುಂಚಿತವಾಗಿ ಆಯೋಗಕ್ಕೆ ಬಹುತೇಕ ಸಂಪೂರ್ಣ ಕಾನೂನು ವಿನಾಯಿತಿ ನೀಡುವುದು ಮತ್ತು 45 ದಿನಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಮಾಡುವ ನಿರ್ಧಾರ. ಉತ್ತರ ಒಂದೇ, ಅದು ಬಿಜೆಪಿ ಚುನಾವಣಾ ಆಯೋಗವನ್ನು ಮತ ಕಳ್ಳತನದ ಸಾಧನವಾಗಿ ಪರಿವರ್ತಿಸುತ್ತಿದೆ ಎಂದು ಬರೆದುಕೊಂಡಿದ್ದರು(ಏಜೆನ್ಸೀಸ್).