ರಾಹುಲ್ ಗಾಂಧಿ ಅತ್ಯಂತ ಕಳವಳಕಾರಿ ಅಂಶವೆಂದರೆ ಒಂದೇ ಹೆಸರಿನಲ್ಲಿ ಸಾವಿರಾರು ಆಕ್ಷೇಪಣೆಗಳು ದಾಖಲಾಗಿವೆ, ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಂತಹ ಆಕ್ಷೇಪಣೆಗಳನ್ನು ಸ್ವೀಕರಿಸಿದ್ದೇಗೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿಗೆ ಸೋಲಿನ ಆತಂಕವಿರುವ ಕಡೆಗಳಲ್ಲಿ ಮತದಾರರ ಹೆಸರನ್ನು ಸದ್ದಿಲ್ಲದೆ ಅಳಿಸಲಾಗಿದೆ ಎಂದು ಹೇಳಿದರು. ಈ ಮಾದರಿ ಮೊದಲು ಆಳಂದ ಮತ್ತು ರಾಜುರಾದ ಮೂಲಕ ನಮ್ಮೆಲ್ಲರ ಗಮನಕ್ಕೆ ಬಂದಿದ್ದು, ಈಗ ಅದು ಗುಜರಾತ್ನಲ್ಲಿ ಪುನರಾವರ್ತನೆಯಾಗುತ್ತಿದೆ, ರಾಜಸ್ಥಾನ ಸೇರಿದಂತೆ ಎಸ್ಐಆರ್ ನಡೆಯುತ್ತಿರುವ ಇತರ ರಾಜ್ಯಗಳಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.