ಬಿಹಾರದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸಿದ ಮತದಾರರ ಅಧಿಕಾರ ಯಾತ್ರೆಯು ಸಸಾರಂನಿಂದ ಪ್ರಾರಂಭವಾಗಿ ಪಾಟ್ನಾದಲ್ಲಿ ಕೊನೆಗೊಂಡಿತು. ಈ ಯಾತ್ರೆಯು ರಾಜ್ಯದ 25 ಜಿಲ್ಲೆಗಳು ಮತ್ತು 110 ವಿಧಾನಸಭಾ ಕ್ಷೇತ್ರಗಳನ್ನೋಳಗೊಂಡು, ಸುಮಾರು 1,300 ಕಿ.ಮೀ. ಕ್ರಮಿಸಿತು. ಆದರೆ ಈ ಮಾರ್ಗದ ಬಹುತೇಕ ಕ್ಷೇತ್ರಗಳು ಕಾಂಗ್ರೆಸ್ಪಕ್ಷವು ಮುನ್ನಡೆ ಸಾಧಿಸಾಲು ಸಾಧ್ಯವಾಗಿಲ್ಲ. ಪ್ರಸ್ತುತ ಫಲಿತಾಂಶವು ಕಾಂಗ್ರೆಸ್ ಸ್ಪರ್ಧಿಸಿದ 61 ಸ್ಥಾನಗಳಲ್ಲಿ ಕೇವಲ ನಾಲ್ಕು ಸ್ಥಾನಗಳಾದ ವಾಲ್ಮೀಕಿ ನಗರ, ಕಿಶನ್‌ಗಂಜ್, ಮಣಿಹರಿ ಮತ್ತು ಬೇಗುಸರಾಯ್ - ಮುನ್ನಡೆ ಸಾಧಿಸುತ್ತಿದೆ.