ಚಾರ್ಜ್ಶೀಟ್ನಲ್ಲಿ ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಆರೋಪಿಸಿದ್ದು, ಒಟ್ಟು 23 ಆರೋಪಿಗಳನ್ನು ಹೆಸರಿಸಿದ್ದಾರೆ. ಥಿಯೇಟರ್ ಆಡಳಿತ ಮಂಡಳಿಯನ್ನು ಎ1 ಮಾಡಿದ್ದು, ನಟ ಅಲ್ಲು ಅರ್ಜುನ್ ಅವರನ್ನು ಎ11 ಮಾಡಿದ್ದಾರೆ. ಜೊತೆಗೆ ಮೂವರು ವ್ಯವಸ್ಥಾಪಕರು ಮತ್ತು 8 ಬೌನ್ಸರ್‌ಗಳನ್ನು ಸಹ ಆರೋಪ ಪಟ್ಟಿಯಲ್ಲಿದ್ದಾರೆ. ಜೊತೆಗೆ ನಾಲ್ವರು ಪ್ರತ್ಯಕ್ಷದರ್ಶಿಗಳ ಹೆಸರಿದೆ.