ಜನರ ಸಾವಿಗೆ ಪ್ರತಿಭಟನೆಕಾರರೇ ಕಾರಣ; ಬೆಂಬಲಿಸಿದ ಟ್ರಂಪ್ ಅಪರಾಧಿ; ಇರಾನ್ ಸರ್ವೋಚ್ಚ ನಾಯಕ ಖಮೇನಿ | Khamenei

ಡೊನಾಲ್ಡ್ ಟ್ರಂಪ್ ಮತ್ತು ಅಯತೊಲ್ಲಾ ಅಲಿ ಖಮೇನಿ
ಡೊನಾಲ್ಡ್ ಟ್ರಂಪ್ ಮತ್ತು ಅಯತೊಲ್ಲಾ ಅಲಿ ಖಮೇನಿ
Published on
ಟೆಹ್ರಾನ್: ಇರಾನ್​ನಲ್ಲಿ ಆಂತರಿಕ ದಂಗೆಗೆ ಬೆಂಬಲ ಕೊಟ್ಟ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಪರಾಧಿ ಎಂದು ಕರೆದಿರುವ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ದೇಶದಲ್ಲಿ ಸಾವಿರಾರು ಜನರ ಸಾವಿಗೆ ಪ್ರತಿಭಟನಾಕಾರರೇ ಕಾರಣ ಎಂದು ದೂಷಿಸಿದ್ದಾರೆ.
ಇರಾನ್ ಸರ್ಕಾರ ಬಿಡುಗಡೆ ಮಾಡಿರುವ ಟಿವಿ ಸುದ್ದಿ ಮಾಧ್ಯಮದಲ್ಲಿ ಮಾತನಾಡಿರುವ ಖಮೇನಿ, ದೇಶದಲ್ಲಿನ ಪ್ರತಿಭಟನೆಗಳು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿವೆ. ಈ ದಂಗೆಯಲ್ಲಿ ಅಮೆರಿಕದ ಅಧ್ಯಕ್ಷರು ವೈಯಕ್ತಿಕವಾಗಿ ಹೇಳಿಕೆ ನೀಡಿ, ದೇಶದ್ರೋಹಿ ಜನರನ್ನು ಮುಂದೆ ಹೋಗಲು ಪ್ರೋತ್ಸಾಹಿಸಿದರು. ನಿಮ್ಮನ್ನು ಬೆಂಬಲಿಸುತ್ತೇವೆ. ಮಿಲಿಟಿರಿ ಶಕ್ತಿಯಾಗಿ ನಿಮಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಇರಾನ್​​ನ ಆರ್ಥಿಕ ಅಥವಾ ರಾಜಕೀಯ ಸಂಪನ್ಮೂಲಗಳ ಮೇಲೆ ಅಮೆರಿಕಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ದೇಶದ ವಿರುದ್ಧ ಆರೋಪ, ಸಾವು-ನೋವು, ದೇಶದ ಸಂಪತ್ತು ಹಾನಿಯಿಂದಾಗಿ ನಾವು ಅಮೆರಿಕ ಅಧ್ಯಕ್ಷರನ್ನು ಅಪರಾಧಿ ಎಂದು ಪರಿಗಣಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ನಾಯಕತ್ವ ಹುಡುಕುವ ಸಮಯ

ಖಮೇನಿ ಹೇಳಿಕೆಗೆ ಸಂಬಂಧಿಸಿದಂತೆ ಶನಿವಾರ(ಜ. 17) ಪೊಲಿಟಿಕೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಇರಾನ್​ನ ವ್ಯಕ್ತಿ ಓರ್ವ ಅನಾರೋಗ್ಯ ಪೀಡಿತ ವ್ಯಕ್ತಿ. ಅವನು ತನ್ನ ದೇಶವನ್ನು ಸರಿಯಾಗಿ ನಡೆಸಬೇಕು. ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು. ಆತನ ನಾಯಕತ್ವದಿಂದ ಇರಾನ್ ಜಗತ್ತಿನಲ್ಲೇ ವಾಸಿಸಲು ಯೋಗ್ಯವಲ್ಲದ ಅತ್ಯಂತ ಕೆಟ್ಟ ಸ್ಥಳವಾಗಿದೆ. ಈಗ ಹೊಸ ನಾಯಕತ್ವ ಹುಡುಕುವ ಸಮಯ ಬಂದಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net