ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿಗಳು ರಚನೆಗೊಂಡಿವೆ. ಪ್ರತ್ಯೇಕ ರಾಜ್ಯ ಮಟ್ಟದ ಜಾಗೃತಿ ಹಾಗೂ ತನಿಖಾ ದಳ ರಚಿಸಲು ಯಾವುದೇ ಅವಕಾಶವಿಲ್ಲ. ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕಾಳಸಂತೆ ತಡೆ ಕಾಯ್ದೆ 1980ರ ಅಡಿಯಲ್ಲಿ ಅನಿರೀಕ್ಷಿತ ದಾಳಿ ನಡೆಸುವುದು, ತನಿಖೆ ಮಾಡುವುದು,ಎಫ್ಐಆರ್ ದಾಖಲಿಸುವ ಅಧಿಕಾರ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಮತ್ತು ಸ್ಥಳೀಯ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ. ಹೀಗಾಗಿ, ರಾಜ್ಯ ಮಟ್ಟದ ದಳಕ್ಕೆ ಕಾನೂನಾತ್ಮಕವಾಗಿ ದಾಳಿ ಮಾಡುವ ಅಥವಾ ಎ್ಐಆರ್ ದಾಖಲಿಸುವ ಅಧಿಕಾರ ಇರುವುದಿಲ್ಲ.