ಸಂಸದೆ ಪ್ರಿಯಾಂಕಾ ಗಾಂಧಿ ಈ ಟೀಕೆಗೆ ಕಾಮಕೋಟಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದೇ ಮುಖ್ಯ ಕಾರಣವಾಗಿದೆ. 2025ರ ಜನವರಿಯಲ್ಲಿ ಚೆನ್ನೈನ ಗೋಶಾಲೆಯೊಂದರಲ್ಲಿ ನಡೆದ ಮಾಟು ಪೊಂಗಲ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಮಕೋಟಿ, ನಾಟಿ ತಳಿಯ ಹಸುಗಳು ಮತ್ತು ಸಾವಯವ ಕೃಷಿಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿರೋಧಕ ಮತ್ತು ಜೀರ್ಣಕಾರಿ ಗುಣಗಳಿವೆ ಎಂದು ಪ್ರತಿಪಾದಿಸಿದ್ದರಲ್ಲದೆ, ತಪಸ್ವಿಯೊಬ್ಬರ ಜ್ವರ ಗೋಮೂತ್ರ ಸೇವನೆಯಿಂದ ಶಮನವಾಗಿತ್ತು ಎಂಬ ಉದಾಹರಣೆಯನ್ನು ಹಂಚಿಕೊಂಡಿದ್ದರು.