1975 ರಿಂದ ಕಾಂಗ್ರೆಸ್ನಲ್ಲಿದ್ದ ಬೋರ್ಡೊಲೊಯ್, ಪಕ್ಷವನ್ನು ತೊರೆದ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ನಲ್ಲಿ ತಮಗಾದ ಅವಮಾನದ ಬಗ್ಗೆ ಕಿಡಿಕಾರಿದ್ದಾರೆ. ನನಗೆ ಅಲ್ಲಿ ಉಸಿರುಗಟ್ಟುವ ವಾತಾವರನ ನಿರ್ಮಾಣವಾಗಿತ್ತು, ಪಕ್ಷದ ಹಿರಿಯ ನಾಯಕರ ಮುಂದೆಯೇ ನನ್ನ ಮಾತಿಗೆ ಬೆಲೆ ಇಲ್ಲದಂತಾಗಿತ್ತು. ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಗ್ಗೆ ನಾನು ನೀಡಿದ ಪುರಾವೆಗಳನ್ನು ಕಟ್ಟುಕಥೆ ಎಂದು ಜರೆದಾಗಲೂ ಅಧ್ಯಕ್ಷರು ಮೌನವಾಗಿದ್ದರು. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುವ ಕಾರಣದಿಂದ ಪಕ್ಷ ತೊರೆದಿದ್ದೇನೆ ಎಂದರು.