ಬಳಿಕ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜರ್ಮನ್ ಭಾಷೆಯಲ್ಲಿ ಬರೆದುಕೊಂಡಿರುವ ಸಬ್ರಿನಾ, "ಕೆಲವು ತರಚು ಗಾಯಗಳನ್ನು ಹೊರತುಪಡಿಸಿ ನಾನು ಸುರಕ್ಷಿತವಾಗಿದ್ದೇನೆ. ನಾನಿನ್ನೂ ಇಲ್ಲಿ ಕುಳಿತು ಈ ಪೋಸ್ಟ್ ಬರೆಯುತ್ತಿದ್ದೇನೆ ಎಂಬುದನ್ನು ನನಗೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಶ್ಚರ್ಯ ಮತ್ತು ನಿರಾಳತೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಾಯುಪ್ರದೇಶದಲ್ಲಿ ಹಾರಾಡುವಾಗ ಎದುರಾಗುವ ಅಪಾಯಗಳು ಮತ್ತು ತುರ್ತು ಸುರಕ್ಷತಾ ಸಾಧನಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರುತ್ತಿದೆ, (ಏಜೆನ್ಸೀಸ್).