ಡೆಲಿವರಿ ಬಾಯ್ ನೀಡಿದ ದೂರಿನ ಪ್ರಕಾರ, ಆನ್ಲೈನ್ ಆರ್ಡರ್ ಪಿಕಪ್ ಮಾಡಲು ತೆಳಿದ್ದಾಗ ಅಲ್ಲಿನ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣ ಶಾಪ್ಗೆ ಇತ್ತೀಚೆಗೆ ಆನ್ಲೈನ್ನಲ್ಲಿ ಶಾಪ್ಗೆ ಗ್ರಾಹಕರು ಕಡಿಮೆ ರೇಟಿಂಗ್ ನೀಡಿದ್ದು, ಶಾಪ್ನ ಇಮೇಜ್ ಮೇಲೆ ಪರಿಣಾಮ ಬೀರಿದೆ. ಅದಕ್ಕೆ ನಾನು ಕಾರಣ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.