ಘಟನೆಯ ವಿವರಕ್ಕೆ ಬರುವುದಾದರೆ, ಕೇರಳದ ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರು ಕೇವಲ 690 ರೂಪಾಯಿ ಮೌಲ್ಯದ ಪಾದರಕ್ಷೆ ನಷ್ಟವನ್ನು, ಬರೋಬ್ಬರಿ 5,000 ರೂಪಾಯಿ ಪರಿಹಾರ ಹಾಗೂ ಒಂದು ಹೊಸ ಜೋಡಿ ಚಪ್ಪಲಿಗಳಾಗಿ ಬದಲಾಯಿಸಿಕೊಳ್ಳುವ ಮೂಲಕ ಗ್ರಾಹಕ ನ್ಯಾಯಾಲಯದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಕೋಝಿಕೋಡ್ ಮೂಲದ ಪಾದರಕ್ಷೆ ತಯಾರಿಕಾ ಕಂಪನಿಯ ವಿರುದ್ಧ ಬೋಬನ್ ಅವರು ನಡೆಸಿದ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ಗ್ರಾಹಕ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಸಂಧಾನ ಮಾತುಕತೆಯಲ್ಲಿ ಕಂಪನಿಯು ಈ ಪರಿಹಾರ ನೀಡಲು ಒಪ್ಪಿಕೊಂಡಿದೆ.