ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್ ಮೂಲಕ ಕಾಂಗ್ರೆಸ್ ಸಂಸದೆಯ ಕಾಲೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರೆ ಸಂಜು ವರ್ಮಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮೂಲ ಪಪ್ಪು ಮಹಾಶಯರ ಬಳಿಕ, ಈಗ ನಮಗೆ ಪಪ್ಪು ಆವೃತ್ತಿ 2.0 ಸಿಕ್ಕಿದೆ. ಭಾರತದ ಇಡೀ ಜನಸಂಖ್ಯೆಯೇ 145 ರಿಂದ 147 ಕೋಟಿಯಷ್ಟಿದೆ, ಹಾಗಿರುವಾಗ 750 ಕೋಟಿ ವಿದ್ಯಾರ್ಥಿಗಳು ಎಲ್ಲಿಂದ ಬಂದರು ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.