ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಪವರ್‌ಪ್ಲೇ ಅಂತ್ಯಕ್ಕೆ 50 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿದ್ದ ಡಚ್ ತಂಡ, ನಂತರ ಪಾಕಿಸ್ತಾನದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿತು. ನಾಯಕ ಸ್ಕಾಟ್ ಎಡ್ವರ್ಡ್ಸ್ (37 ರನ್) ಮತ್ತು ಬಾಸ್ ಡಿ ಲೀಡೆ (30 ರನ್) ಹೋರಾಟದ ಹೊರತಾಗಿಯೂ, ತಂಡವು 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಪರ ಸಲ್ಮಾನ್ ಮಿರ್ಜಾ 3 ವಿಕೆಟ್ ಪಡೆದು ಮಿಂಚಿದರೆ, ಅಬ್ರಾರ್ ಅಹ್ಮದ್ ಮತ್ತು ಸೈಮ್ ಅಯೂಬ್ ತಲಾ 2 ವಿಕೆಟ್ ಕಬಳಿಸಿದರು.